ಮೈಸೂರು: ಕನ್ನಡ ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನದಿಂದ ಸಮುದ್ರಕ್ಕೆ ಸೇರುವವರೆವಿಗೂ ಸಂಪೂರ್ಣ ಚಿತ್ರಣವಿರುವ ಕಾವೇರಿ ಕಲಾ ಗ್ಯಾಲರಿಯನ್ನು ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಲು ಮುಂದಾಗಿದೆ. ಕಾವೇರಿ ನದಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ಬಹುತೇಕ ಜನರಿಗೆ ತಿಳಿಯದೆ ಇರುವುದನ್ನು ಮನ ಗಂಡಿರುವ ಕರ್ನಾಟಕ ಜ್ಞಾನ ಆಯೋಗವು ಕಾವೇರಿ ಗ್ಯಾಲರಿಯನ್ನು ನಿರ್ಮಿಸಿ ಮೈಸೂರಿನ ಜನತೆಗೆ ಮಾತ್ರವಲ್ಲದೆ, ಪ್ರವಾಸಿಗರಿಗೆ ಮಹತ್ತರವಾದ ಮಾಹಿತಿಯನ್ನು ಒದಗಿಸುವುದಕ್ಕಾಗಿ 2016ರಲ್ಲಿ ಈ ಹಿಂದಿನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಾವೇರಿ ನದಿಯ ಸಂರಕ್ಷಣೆಯ ಹಿತದೃಷ್ಟಿಯಿಂದ…