ಮೈಸೂರು: ಪ್ರತ್ಯೇಕ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಶಾಂತಲಾ ಚಿತ್ರಮಂದಿರದ ಸಿಗ್ನಲ್ ಬಳಿ ಮೇ19ರಂದು ಬೆಂಗಳೂರಿನ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಗೊಲ್ಲಗೇರಿಯ ನಿವಾಸಿ ಮನೋಜ್ (22), ಇಟ್ಟಿಗೆಗೂಡಿನ ನಿವಾಸಿ ಹರ್ಷಿತಾಗೌಡ (25) ಹಾಗೂ ವೀಣೆಶೇಷಣ್ಣ ರಸ್ತೆಯ ನಿವಾಸಿ ಮಹೇಶ್‍ಕುಮಾರ್ (24) ಅವರನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಚಂದು ಎಂಬುವವನನ್ನು ಬಂಧಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಮದ್ಯ ಸೇವಿಸಿ ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಸಮೀಪ…