ಗುಂಡ್ಲುಪೇಟೆ: ತಾಲೂಕಿನ ಪ್ರಮುಖ ಐತಿಹಾಸಿಕ ಧಾರ್ಮಿಕ ಕೇಂದ್ರಗಳನ್ನು ಪ್ರವಾಸೋದ್ಯಮ ಇಲಾಖೆಯ ನೆರವಿನಿಂದ ಅಭಿವೃದ್ಧಿಪಡಿ ಸಲಾಗುವುದು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.ತಾಲೂಕಿನ ಮಂಚಹಳ್ಳಿ ಸಮೀಪದಲ್ಲಿ ರುವ ಕರಸ್ಥಲ ಶ್ರೀ ನಾಗಲಿಂಗೇಶ್ವರ ಗವಿ ಕ್ಷೇತ್ರದ ಬಳಿ ನಿರ್ಮಿಸಿರುವ ನೂತನ ಶೌಚಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಂದರ ಪ್ರಕೃತಿಯ ನಡುವೆ ಇರುವ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ನಾಗ ಲಿಂಗೇಶ್ವರರು ತಪಸ್ಸು ಮಾಡಿ ಐಕ್ಯವಾದ ಈ ಸ್ಥಳಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಿ ದ್ದಾರೆ. ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗಳ ಅನುಕೂಲಕ್ಕೆ…