ಮೈಸೂರು: ಆಪ್ತಮಿತ್ರ ಖ್ಯಾತಿಯ ವಿದ್ವಾನ್ ಶ್ರೀಧರ್ ಜೈನ್‍ರವರ ಶ್ರೀ ನಿಮಿಷಾಂಬ ನೃತ್ಯ ಶಾಲೆಯ ವಿದ್ಯಾರ್ಥಿನಿ ಕು. ಆಗ್ನಿಕಾ ಅಜಯ್ ಕುಮಾರ್ ಅವರು ಸ್ಪೇನ್‍ನ ಬಾರ್ಸಿಲೋನಾದಲ್ಲಿ ಜೂ. 30 ರವರೆಗೆ ನಡೆಯುವ ಡ್ಯಾನ್ಸ್ ವಲ್ರ್ಡ್ ಕಪ್ ಫೈನಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ 54 ದೇಶಗಳ ಒಟ್ಟು 30,000 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಜನವರಿ 30 ರಂದು ಬೆಂಗಳೂರಿನಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಶಾಸ್ತ್ರೀಯ ನೃತ್ಯಗಳ ವಿಭಾಗದಲ್ಲಿ ಈಕೆ ಆಯ್ಕೆಯಾಗಿದ್ದರು. ಈಕೆ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಛೇರ್‍ಮನ್ ಡಾ. ಅಜಯ್‍ಕುಮಾರ್ ಮತ್ತು…