ಮೈಸೂರು: ಮೈಸೂರಿನ ಅರಸು ಜಾಗೃತಿ ಅಕಾಡೆಮಿ ಮತ್ತು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ ಜೂ. 6 ರಂದು ಸಂಜೆ 5 ಗಂಟೆಗೆ ಅರಮನೆ ಉತ್ತರ ದ್ವಾರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಪುಣ್ಯಸ್ಮರಣೆ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ ಡಾ. ಡಿ. ತಿಮ್ಮಯ್ಯ ಉದ್ಘಾಟಿಸುವರು. ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ. ಲಕ್ಷ್ಮಣ್ ದಿವಂಗತ ದೇವರಾಜೇ ಅರಸ್ ಅವರನ್ನು ಕುರಿತು…