ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯ ರ್ಥಿಗಳಿಗೆ ಚುನಾವಣಾ ಆಯೋಗ ವೆಚ್ಚದ ಮಿತಿ ಯನ್ನು ಕೇವಲ 70 ಲಕ್ಷ ರೂ.ಗೆ ಸೀಮಿತಗೊಳಿಸಿದ್ದು, ವಾಸ್ತವವಾಗಿ ಈ ಮೊತ್ತ ಅಭ್ಯರ್ಥಿಗಳ ಪಾಲಿಗೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರತಿದಿನ ತಮ್ಮ ಚುನಾವಣಾ ಖರ್ಚು ವೆಚ್ಚವನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾ ಗಿದ್ದು, ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣಾ ಫಲಿತಾಂಶ ಘೋಷಣೆಯಾದ 30 ದಿನದೊಳಗೆ ತನ್ನ ಚುನಾವಣಾ ವೆಚ್ಚಗಳ ಲೆಕ್ಕದ ಸಂಪೂರ್ಣ ಪ್ರತಿಯೊಂದನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿ ಸುವುದು…