ಮೈಸೂರು: ಪ್ರಥಮ ಏಕಾದಶಿ ಅಂಗವಾಗಿ ಮೈಸೂರಿನ ಲಷ್ಕರ್ ಮೊಹಲ್ಲಾ ಕಬೀರ್ ರಸ್ತೆ ಶ್ರೀ ಪಾಂಡುರಂಗ ವಿಠಲಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮುಂಜಾನೆ 5 ಗಂಟೆಗೆ ಕಾಕಡಾರತಿ, ವಿಶೇಷ ಹಾಲಿನ ಅಭಿಷೇಕ, ಫಲ ಪಂಚಾಮೃತ, ಅಷ್ಟೋತ್ತರ ಪೂಜೆ ಇನ್ನಿತರ ಪೂಜೆಗಳು ನಡೆದವು. ಇದರ ಅಂಗವಾಗಿ ಇಡೀ ದೇವಾಲಯವನ್ನು ವಿಶೇಷ ಹೂವಿನ ಅಲಂಕರಿಸಲಾಗಿತ್ತು. ಸಂಜೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯಿಂದ ದೇವರನಾಮ, ಭಜನೆ, ವಿದ್ವಾನ್ ಗಣೇಶ್ ಶರ್ಮಾ ಅವರಿಂದ ಪ್ರವಚನ, ರಾತ್ರಿ ಮೈಸೂರಿನ ಇಸ್ಕಾನ್ ತಂಡದಿಂದ…