ಮೈಸೂರು: ಹೇರ್ ಸ್ಟ್ರೈಟ್ನಿಂಗ್ ಮಾಡಿಸಿಕೊಂಡ ಬೆನ್ನಲ್ಲೆ ಕೂದಲು ಉದು ರಿದಕ್ಕೆ ಕಂಗಾಲಾದ ವಿದ್ಯಾರ್ಥಿಯೋರ್ವಳು ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನಲ್ಲಿ ಕಾಣೆಯಾಗಿದ್ದ ಕೊಡಗಿನ ವಿದ್ಯಾರ್ಥಿನಿ ಜಿ.ನೇಹಾ ಗಂಗಮ್ಮ(19) ಕೊಡಗಿನ ಗೋಣಿಕೊಪ್ಪ ಸಮೀಪದ ನಿಟ್ಟೂರು ಲಕ್ಷ್ಮಣ ತೀರ್ಥ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿ ನಿಟ್ಟೂರು ಗ್ರಾಮದ ಪ್ರಭಾ, ಶೈಲಾ ದಂಪತಿಯ ಪುತ್ರಿ. ಶವ ಹೊರ ತೆಗೆದಿರುವ ಪೊನ್ನಂಪೇಟೆ ಪೊಲೀಸರು ಶವವನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಿದ್ದಾರೆ. ಶನಿವಾರ ಸಂಜೆ ಹೊಳೆಯಲ್ಲಿ…