ತಿ.ನರಸೀಪುರ, ಏ.17(ಎಸ್‍ಕೆ)-ಮದುವೆ ನಿಶ್ಚಯವಾಗಿದ್ದ ಯುವಕನೊಬ್ಬ ಜೇನು ಕಡಿದು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ತಾಲೂಕಿನ ಕೇತಹಳ್ಳಿ ಗ್ರಾಮದ ಅಂಗಡಿ ಸಿದ್ದಮಲ್ಲಶೆಟ್ಟಿ ಪುತ್ರ ಮಹದೇವಸ್ವಾಮಿ(30) ಮೃತಪಟ್ಟ ಯವಕ. ಈತ ಇಂದು ಬೆಳಿಗ್ಗೆ ವಾಯು ವಿಹಾರ ಮುಗಿಸಿ ತ್ರಿವೇಣಿ ನಗರದ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಪಟ್ಟಣದ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಬಳಿ ಜೇನು ನೊಣಗಳು ದಾಳಿ ಇಟ್ಟಿವೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಾದೇವಸ್ವಾಮಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತಲೆ ಭಾಗಕ್ಕೆ ತೀವ್ರವಾದ ಗಾಯಗಳಾಗಿದ್ದರಿಂದ ಚಿಕಿತ್ಸೆ…