ಮೈಸೂರು: ಕವಿ ಜಯಪ್ಪ ಹೊನ್ನಾಳಿ ರಚಿತ ಕವಿತೆ ಗಳಲ್ಲಿ ಪ್ರೇಮ ಕಾವ್ಯಗಳಿಗೆ ಪ್ರಥಮ ಆದ್ಯತೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ್ ಬಾರಧ್ವಜ್ ಅಭಿಪ್ರಾಯಪಟ್ಟರು. ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಪಕ್ಕದಲ್ಲಿ ರುವ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ `ಕವಿ ಜಯಪ್ಪ ಹೊನ್ನಾಳಿ ಅವರ ಜಯಕವಿ ಭಾವಗೀತ ಲೋಕ- ಒಂದು ಅವಲೋ ಕನ’ ಕುರಿತು ಮಾತನಾಡಿದರು. ಹಿರಿಯ ಕವಿಗಳಾದ ದ.ರಾ.ಬೇಂದ್ರ, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನರಸಿಂಹ ಸ್ವಾಮಿ ಹಾಗೂ ಹೆಚ್.ಎಸ್.ವೆಂಕಟೇಶ್ ಮೂರ್ತಿ ಸೇರಿದಂತೆ ಹಲವು…