ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಚಿತ್ರ ರಂಗದ ಗಣ್ಯರು, ರಾಜಕೀಯ ಧುರೀಣರು ಹಾಗೂ ಲಕ್ಷಾಂತರ ಅಭಿಮಾನಿಗಳು ಶನಿವಾರ ರಾತ್ರಿ ನಿಧನ ಹೊಂದಿದ ಮಾಜಿ ಸಚಿವ, ಕನ್ನಡ ಚಿತ್ರರಂಗದ `ದೊಡ್ಡಣ್ಣ’ ಅಂಬರೀಶ್ ಅವರ ಅಂತಿಮ ದರ್ಶನ ಪಡೆದು, ಅಶ್ರುತರ್ಪಣಗೈದರು. ಶನಿವಾರ ತಡರಾತ್ರಿ ಬೆಂಗಳೂರಿನ ವಿಕ್ರಂ ಆಸ್ಪತ್ರೆ ಬಳಿ ಅಪಾರ ಸಂಖ್ಯೆ ಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ಮುಂಜಾನೆ ವೇಳೆಗೆ ಅಂಬರೀಶ್ ಪಾರ್ಥಿವ ಶರೀರವನ್ನು ಆಸ್ಪತ್ರೆ ಹಿಂಬಾಗಿಲ ಮೂಲಕ ಜೆ.ಪಿ.ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಇಲ್ಲಿ ಅವರ ಕುಟುಂಬ ವರ್ಗ, ಸಂಬಂಧಿ…