ಬೆಂಗಳೂರು: 7927.23 ಕೋಟಿ ರೂಪಾಯಿ 2019-20ನೇ ಸಾಲಿನ ಪೂರಕ ಅಂದಾಜಿನ ಎರಡನೇ ಕಂತನ್ನು ಅಂಗೀಕರಿಸುವಂತೆ ಹಣಕಾಸು ಖಾತೆಯನ್ನು ಹೊಂದಿ ರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ದಿಂದ ಅರ್ಹ ರೈತರಿಗೆ ಸಹಾಯ ಧನ ನೀಡಲು 1000 ಕೋಟಿ ರೂ. ಜೊತೆಗೆ 489.14 ಕೋಟಿ ರೂಪಾಯಿ ಮರು ಹೊಂದಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದರ ಜೊತೆಗೆ ಯೋಜನೆ ಅನುಷ್ಠಾನಕ್ಕಾಗಿ 1500 ಕೋಟಿ ರೂಗಳನ್ನ ಒದಗಿಸಲಾಗಿದೆ….
ಮೈಸೂರು
ಯತ್ನಾಳ್ ಸತ್ಯ ಹೇಳ್ತಾರೆ, ಅವ್ರು ನನಗೆ ಒಳ್ಳೆ ಸ್ನೇಹಿತ
October 11, 2019ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಧಿವೇಶನದ ಮೊದಲ ದಿನವೇ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾ ರದ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮಾತಿನ ಧಾಟಿಯ ಮೂಲಕವೇ ಬಿಜೆಪಿಯಲ್ಲಿ ಕಾಣಿಸಿಕೊಂಡ ಭಿನ್ನ ಮತ ಹಾಗೂ ಅಸಮಾಧಾನವನ್ನು ಕೆಣಕಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸತ್ಯ ಹೇಳುತ್ತಾರೆ. ಅವರು ನನಗೆ ಒಳ್ಳೆ ಸ್ನೇಹಿತ. ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರನ್ನು ಅಧಿಕಾರದಿಂದ ತೆಗೆಯುವುದಕ್ಕೆ ಇಬ್ಬರು ಕೇಂದ್ರ ಸಚಿವರು ಹೊರಟಿದ್ದಾರೆ ಅಂತ ಯತ್ನಾಳ್ ಹೇಳಿದ್ದಾರೆ. ಪಾಪ ಯತ್ನಾಳ್…