ಮೈಸೂರು: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲು ಸಾರಿಗೆ ಸಂಸ್ಥೆ ಮುಂದಾಗಿದ್ದು, ಕರ್ತವ್ಯದ ವೇಳೆ ಚಾಲಕರು ಹಾಗೂ ನಿರ್ವಾಹಕರು ಮೊಬೈಲ್ ಬಳಸಿ ದರೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ನ.15ರಿಂದ ಬಿಎಂಟಿಸಿ ಬಸ್ ನಲ್ಲಿ ಚಾಲಕರು ಹಾಗೂ ನಿರ್ವಾಹಕರು ಮೊಬೈಲ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ಮೊಬೈಲ್‍ಗಳನ್ನು ಡಿಪೋಗಳ ಲಾಕರ್‍ನಲ್ಲಿಟ್ಟು ಹೋಗುವಂತೆ ಕಟ್ಟಪ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮೈಸೂ ರಿನಲ್ಲಿಯೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು 1 ವರ್ಷದ ಹಿಂದೆಯೇ ಜಾರಿಗೆ ತಂದಿರುವ ಮೊಬೈಲ್ ಬಳಕೆ ನಿಷೇಧ ನಿಯಮವನ್ನು…