ಸೋಮವಾರಪೇಟೆ: ಮಲ್ಲಳ್ಳಿ ಜಲಪಾತದಲ್ಲಿ ಕಳೆದ ಶುಕ್ರವಾರ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿಬಿದ್ದು, ಮೃತಪಟ್ಟ ಕುಶಾಲನಗರ ಸುಂದರನಗರ ನಿವಾಸಿ ಮನೋಜ್(24)ನ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಮಲ್ಲಳ್ಳಿ ಗ್ರಾಮದ ಕೃಷಿಕ ಮಲ್ಲಪ್ಪ ನೀಡಿದ ಮಾಹಿತಿಯ ನ್ವಯ, ಠಾಣಾಧಿಕಾರಿ ಎಂ.ಶಿವಣ್ಣ ನೇತೃತ್ವದ ತಂಡ ನದಿ ಯಲ್ಲಿ ಶೋಧ ನಡೆಸಿ ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜಲಪಾತದಿಂದ ಒಂದು ಕಿ.ಮೀ. ದೂರದಲ್ಲಿ ಕುಮಾರಧಾರ ನದಿಯ ಬದಿಯಲ್ಲಿ ಬಳ್ಳಿಯೊಂದಕ್ಕೆ ಸಿಲುಕಿಕೊಂಡಿದ್ದ ಮೃತದೇಹವನ್ನು ಹೊರ ತೆಗೆಯಲಾ ಗಿದೆ. ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ಎರಡು ಕಿ.ಮೀ. ಕಾಲು ದಾರಿಯಲ್ಲಿ…
ಕೊಡಗು
ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಗೀಳಿಗೆ ಯುವಕ ನೀರುಪಾಲು
June 23, 2018ಸೋಮವಾರಪೇಟೆ: ಮಲ್ಲಳ್ಳಿ ಜಲಪಾತಕ್ಕೆ ವಿಹಾರಕ್ಕಾಗಿ ತೆರಳಿದ್ದ ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳುತ್ತಿ ದ್ದಾಗ ಕಾಲುಜಾರಿ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ಸಂಜೆ 5 ಗಂಟೆಗೆ ಸಂಭವಿಸಿದೆ. ಕುಶಾಲನಗರ ಸುಂದರನಗರದ ನಿವಾಸಿ ನಾಗರಾಜು ಎಂಬುವವರ ಪುತ್ರ ಮನೋಜ್ (24) ಸೆಲ್ಫಿ ಗೀಳಿಗೆ ಬಲಿಯಾದ ಯುವಕ ಮೃತ ಮನೋಜ್ ತನ್ನ ಐವರು ಸ್ನೇಹಿತರುಗಳಾದ ಅರುಣ, ಅನಿಲ್ ಕುಮಾರ್, ಮಂಜು, ವಿಜಯಕುಮಾರ್, ಜಾನ್ಸನ್ ಎಂಬುವವರೊಂದಿಗೆ ಶಾಂತಳ್ಳಿಯ ಕುಮಾರಲಿಂಗೇ ಶ್ವರ ಸಮೂದಾಯ ಭವನದಲ್ಲಿ ಶುಕ್ರವಾರ ವಿವಾಹ ಸಮಾರಂಭಕ್ಕೆಂದು ಆಗಮಿಸಿ, ನಂತರದಲ್ಲಿ ಸಂಜೆ ಸುಮಾರು…