ಮಡಿಕೇರಿ: ಭಾಗಮಂಡಲ ಸಮೀಪವಿರುವ ಅಯ್ಯಂಗೇರಿ ಸರಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆಯುವುದಾಗಿ ಜೆಡಿಎಸ್ ಎಂಎಲ್‍ಸಿ ಆರ್.ಶರವಣ ಘೋಷಿಸಿದ್ದಾರೆ. ಮಡಿಕೇರಿಗೆ ಆಗಮಿಸಿದ ಅವರು ಅತಿ ವೃಷ್ಟಿಯಿಂದ ಹಾನಿ ಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ಮಳೆಯಿಂದ ಹಾನಿಗೀಡಾದ ಅಯ್ಯಂಗೇರಿ ಸರಕಾರಿ ಶಾಲೆಯನ್ನು ದತ್ತು ಪಡೆದು ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸು ಹೊಂದಿದ್ದೇನೆ. ತನ್ನ ಹುಟ್ಟು ಹಬ್ಬದ ಸಂದರ್ಭ ಈ ಬಗ್ಗೆ ತೀರ್ಮಾನ ತೆಗೆದು ಕೊಂಡಿದ್ದೆ. ಹೆಚ್ಚುವರಿ ಕಟ್ಟಡ ವ್ಯವಸ್ಥೆ, ಪೀಠೋಪಕರಣ ಸೇರಿ ದಂತೆ ಶಾಲೆಗೆ…