ಮೈಸೂರು: ಪೊಲೀಸ್ ಇಲಾಖೆಗೆ ಇನ್ನೂ ಮಹಿಳಾ ಸಿಬ್ಬಂದಿ ಅಗತ್ಯತೆ ಹೆಚ್ಚಾಗಿದೆ ಎಂದು ಸಿಐಡಿ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಜ್ಯೋತಿನಗರದ ಡಿಎಆರ್ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ತರಬೇತಿ ಶಾಲೆಯ 3ನೇ ತಂಡದ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್‍ಗಳ ನಿರ್ಗಮನ ಪಥ ಸಂಚಲನ ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ ಉತ್ತಮ ದೇಹದಾಢ್ರ್ಯ ಹೊಂದಿರುವ ಪುರುಷ ಸಿಬ್ಬಂದಿಗಳಿದ್ದರೆ ಸಾಕು, ಅಲ್ಲಿ ಮಹಿಳೆಯರಿಗೇನು ಕೆಲಸ…
ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಖದೀಮರ ಬಂಧನ: ಲಕ್ಷಾಂತರ ರೂ. ಚಿನ್ನಾಭರಣ ವಶ
May 11, 2019ಮೈಸೂರು: ಮೈಸೂರಿನಲ್ಲಿ ಆತಂಕ ಸೃಷ್ಟಿಸಿರುವ ಸರಗಳ್ಳರ ಹೆಡೆಮುರಿ ಕಟ್ಟಲು ಮುಂದಾಗಿರುವ ಪೊಲೀಸರು, ಶುಕ್ರವಾರ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ಖದೀಮರನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಮಾನಂದವಾಡಿ ರಸ್ತೆಯ ನಾಚನಹಳ್ಳಿ ಪಾಳ್ಯದ ನಿವಾಸಿ ಅಬ್ದುಲ್ ರಹೀಂ ಮಗ ಮೊಹಮದ್ ಸಮೀವುಲ್ಲಾ(25), ಗಾಂಧಿನಗರ ಅಣ್ಣಮ್ಮ ದೇವಾ ಲಯ ರಸ್ತೆಯ ಅಕ್ರಂ ಪಾಷಾ ಪುತ್ರ ಮಹಮದ್ ಅಬ್ರಾನ್ ಅಲಿಯಾಸ್ ಅಬ್ಬು(21), ರಾಜೇಂದ್ರನಗರದ ಮಹಮದ್ ಅಕ್ರಂ ಪುತ್ರ ಮಹಮದ್ ಇದ್ರೀಸ್ ಅಲಿಯಾಸ್ ಕಲ್ಯಾಣ್(20) ಹಾಗೂ ಲೇಟ್ ಎಕ್ಬಾಲ್ ಪಾಷಾ…
ತವರಿಗೆ ಹೋದ ತಾಯಿ, ಮಗಳು ನಾಪತ್ತೆ
May 11, 2019ಮೈಸೂರು: ಮಗಳೊಂದಿಗೆ ತವರಿಗೆ ತೆರಳಿದ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ವ್ಯಕ್ತಿಯೋರ್ವರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನನ್ನ ಪತ್ನಿ ಭುವನೇಶ್ವರಿ(43) ಅವರು ಮಗಳು ಸಿ. ಲಕ್ಷಿತಾ(13) ಜೊತೆ ಬೇಸಿಗೆ ರಜೆಗಾಗಿ ಅವರ ತವರೂರಾದ ಮಂಡ್ಯಗೆ ಏ. 7 ರಂದು ತೆರಳಿದ್ದರು. ಏ. 28 ರಂದು ತಾನು ಬೇಗ ಮನೆಗೆ ಬಾ ಎಂದು ಪತ್ನಿಗೆ ಮೊಬೈಲ್ ಸಂದೇಶ ರವಾನಿಸಿದಾಗ ಆಕೆ ಪ್ರವಾಸದಲ್ಲಿರುವುದಾಗಿ ಪ್ರತಿಕ್ರಿಯಿಸಿ ದರು. ನಂತರ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ತಾನು ಪತ್ನಿಯ ತವರು…
ನಾಳೆ `ಸಚ್ಚಿದಾನಂದಶ್ರೀ’ ಬೃಹತ್ ಗುರುವಂದನಾ ಗ್ರಂಥ ಬಿಡುಗಡೆ
May 11, 2019ಮೈಸೂರು: ಮೈಸೂರಿನ ಅವ ಧೂತ ದತ್ತ ಪೀಠದ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 77ನೇ ಹುಟ್ಟು ಹಬ್ಬದ ಅಂಗವಾಗಿ ಮೇ 12ರಂದು ಸಂಜೆ 4 ಗಂಟೆಗೆ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ `ಸಚ್ಚಿದಾನಂದಶ್ರೀ’ ಗುರುವಂದನಾ ಗ್ರಂಥ ಬಿಡುಗಡೆಗೊಳ್ಳ ಲಿದೆ ಎಂದು ಗ್ರಂಥ ಸಂಪಾದಕ ಸಮಿತಿಯ ಗೌರವ ಸಂಪಾ ದಕ ಪ್ರೊ.ಸಿ.ಪಿ.ಕೃಷ್ಣಕುಮಾರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕರ್ನಾ ಟಕದ ಮಠ ಮಾನ್ಯಗಳ…
ದೊಡ್ಡ ಗಡಿಯಾರ ಗೋಪುರದಲ್ಲಿ ಬಿರುಕು
May 11, 2019ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ದೊಡ್ಡ ಗಡಿಯಾರದ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ. ಈ ಗಡಿಯಾರಕ್ಕೆ ಅಳವಡಿಸಿದ್ದ 5.5 ಅಡಿ ಎತ್ತರದ ಬೃಹತ್ ಕಂಚಿನ ಘಂಟೆಯಿಂದ ಹೊರಹೊಮ್ಮುತ್ತಿದ್ದ ಶಬ್ದದಿಂದ ಬಿರುಕು ಕಾಣಿಸುತ್ತಿರಬಹುದೆಂದು 30 ವರ್ಷದ ಹಿಂದೆಯೇ ಗಂಟೆ ಶಬ್ದವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಬಿರುಕುಗಳು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿ, ನಗರದ ಹೃದಯ ಭಾಗದಲ್ಲಿರುವ ದೊಡ್ಡ ಗಡಿಯಾರ ಈ ಹಿಂದೆ 1…
ಪಾರಂಪರಿಕ ಪ್ರಜ್ಞೆ ಇಲ್ಲದೆ ಸರ್ಕಾರಿ ಅತಿಥಿಗೃಹದ ಹೆಬ್ಬಾಗಿಲ ನವೀಕರಣ ಕಾಮಗಾರಿ ಸಂರಕ್ಷಣೆ ಬದಲು ಸರ್ವನಾಶ ಪ್ರಯತ್ನ…!
May 10, 2019ಮೈಸೂರು: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಪ್ರಯತ್ನದ ನಡುವೆ ಇದಕ್ಕೆ ತದ್ವಿರುದ್ಧವಾದ ಕೃತ್ಯವನ್ನು ರಾಜಾರೋಷವಾಗಿ ನಡೆಸಲಾಗುತ್ತಿದೆ. ಮೈಸೂರಿನ ಸರ್ಕಾರಿ ಅತಿಥಿಗೃಹ, ಪ್ರವೇಶ ದ್ವಾರ ಹಾಗೂ ಸುತ್ತಲಿನ ಕಾಂಪೌಂಡ್ ಪಾರಂಪರಿಕ ಕುರುಹುಗಳು. ಆದರೀಗ ಬೆಂಗಳೂರು-ನೀಲಗಿರಿ ರಸ್ತೆ ಭಾಗ ದಲ್ಲಿರುವ ಪಾರಂಪರಿಕ ಕಮಾನು (ಆರ್ಚ್) ಅನಾಥವಾಗಿ ನಿಂತಂತಿದೆ. ರಸ್ತೆ ಅಗಲೀ ಕರಣಕ್ಕಾಗಿ ಆರ್ಚ್‍ಗೆ ಹೊಂದಿಕೊಂಡಿದ್ದ ಕಾಂಪೌಂಡ್ ತೆರವು ಮಾಡಿ, ಸುಮಾರು 40 ಅಡಿ ಹಿಂದಕ್ಕೆ ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲದೆ ರಿಪೇರಿ ನೆಪದಲ್ಲಿ ಆರ್ಚ್ ಅನ್ನು ಹಾಳು ಮಾಡಲಾಗುತ್ತಿದೆ. ಫಾರ್ಚುನ್…
ಅರಣ್ಯ ಹಕ್ಕು ಕಾಯ್ದೆಯಡಿ ಸವಲತ್ತಿಗೆ ಸಲ್ಲಿಕೆಯಾಗಿ ತಿರಸ್ಕೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆ
May 10, 2019ಮೈಸೂರು: ಅರಣ್ಯ ಹಕ್ಕು ಕಾಯ್ದೆಯಡಿ ಸವಲತ್ತು ಪಡೆಯಲು ಸಲ್ಲಿಕೆಯಾಗಿ ತಿರಸ್ಕೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಒಂದು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಜಿಲ್ಲೆಯಲ್ಲಿ ಕಾರ್ಯ ಚಟುವಟಿಕೆ ಆರಂಭಿಸಲು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಿರಸ್ಕೃತ ಅರ್ಜಿ ಗಳ ಪುನರ್ ಪರಿಶೀಲನೆ ಸಂಬಂಧ ರಾಜ್ಯ ಸರ್ಕಾರ ಏ.22ರಂದು ಸುತ್ತೋಲೆ ಹೊರ ಡಿಸಿದ್ದು, ವಿವಿಧ ಕಾರಣಗಳಿಂದ…
ಕ್ರೀಡಾ ಕ್ಷೇತ್ರದ ಸಾಧಕರಿಗೆ `ನಂದಿ ಪ್ರಶಸ್ತಿ’ ಪ್ರದಾನ
May 10, 2019ಮೈಸೂರು: ಮಹಾ ರಾಜ ಕಾಲೇಜು ಶತಮಾನೋತ್ಸವ ಭವನ ದಲ್ಲಿ ಗುರುವಾರ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ 10 ಮಂದಿಗೆ `ನಂದಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಮೈಸೂರು ಜಿಲ್ಲಾ ಅಥ್ಲೆಟಿಕ್ ಅಸೋಸಿ ಯೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕ್ರೀಡಾ ಪತ್ರಕರ್ತ ಮಹ ಮದ್ ನೂಮನ್, ಕ್ರೀಡಾ ಛಾಯಾ ಗ್ರಾಹಕ ನಾಗೇಶ್ ಪಣತ್ತಲೆ, ಕ್ರೀಡಾಪಟು ಗಳಾದ ಸುಹಾಸ್ ಎಸ್.ಗೌಡ, ಅಪ್ಸನಾ ಬೇಗಂ, ಬಿ.ಮನುಷ್, ಎಸ್.ರಾಹುಲ್ ಕಶ್ಯಪ್, ಎನ್.ರಾಹುಲ್ ನಾಯಕ್, ಲಿಖಿತ ಯೋಗೇಶ್, ಹೆಚ್.ಎಸ್.ಹರ್ಷಿತಾ ಹಾಗೂ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ…
ಶಂಕರ ಜಯಂತಿಯೊಟ್ಟಿಗೆ ಆಚಾರ್ಯತ್ರಯರ ಜಯಂತಿ ಆಚರಣೆಗೆ ಒತ್ತಾಯ
May 10, 2019ಮೈಸೂರು: ಮೈಸೂರಿನ ತ್ಯಾಗರಾಜ ರಸ್ತೆ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಆಚಾರ್ಯತ್ರಯರಾದ ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾ ಚಾರ್ಯರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಚಾರ್ಯತ್ರಯರ ಜಯಂತಿಯನ್ನು ಆಚರಿಸಲಾಯಿತು. ಶಂಕರ ಜಯಂತಿ ಮತ್ತು ರಾಮಾನುಜಾ ಚಾರ್ಯ ಜಯಂತಿ ಅಂಗವಾಗಿ ಮೈಸೂರು ರಾಮಾನುಜ ಸಹಸ್ರಮಾನೋತ್ಸವ ಸಮಿತಿ, ಮೈಸೂರು ನಗರ ಬ್ರಾಹ್ಮಣ ಸಂಘದ ವತಿ ಯಿಂದ ಏರ್ಪಡಿಸಿದ್ದ ಆಧ್ಯಾತ್ಮಿಕ ಜಗತ್ತು’ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಮಾತನಾಡಿದರು. ವಿಶ್ವಕ್ಕೆ ಶಂಕರಾಚಾರ್ಯ, ರಾಮಾನುಜಾ ಚಾರ್ಯ, ಮಧ್ವಾಚಾರ್ಯರ ಕೊಡುಗೆ ಯನ್ನು ಸ್ಮರಿಸುವ…
ಶಂಕರಾಚಾರ್ಯರ ವಿಜೃಂಭಣೆಯ ರಥೋತ್ಸವ
May 10, 2019ಮೈಸೂರು: ವಿಪ್ರ ಜಾಗೃತಿ ವೇದಿಕೆ ವತಿಯಿಂದ ಶಂಕರ ಜಯಂತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ರಥೋತ್ಸವ ವಿಜೃಂ ಭಣೆಯಿಂದ ನಡೆಯಿತು. ವಿದ್ಯಾರಣ್ಯಪುರಂನ ಆವತಿ ಶಂಕರಮಠದಿಂದ ಪ್ರಾರಂಭವಾದ ರಥೋತ್ಸವ ವಿದ್ಯಾರಣ್ಯ ಪುರಂನ ನಾಲ್ಕು ಮತ್ತು ಎರಡನೇ ಮುಖ್ಯ ರಸ್ತೆಯ ಮೂಲಕ ಚಾಮುಂಡಿಪುರಂ ವೃತ್ತದಿಂದ ಅಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಾಗಿತು. ತಳಿರು-ತೋರಣಗಳಿಂದ ಅಲಂಕೃತ ಗೊಂಡಿದ್ದ ಸಾರೋಟಿನಲ್ಲಿ ಶಂಕರಾ ಚಾರ್ಯರ ಚಿತ್ರಪಟ, ಭಜನೆ, ಮಂಗಳ ವಾದ್ಯ, ಮಂತ್ರ ಘೋಷಣೆಯೊಂದಿಗೆ ಸಾಗಿದ ರಥೋತ್ಸವ ಮೆರಗು ನೀಡಿತು. ಇದೇ ವೇಳೆ ಶಂಕರಾಚಾರ್ಯರ ಭಾವ ಚಿತ್ರಕ್ಕೆ…