ಮೈಸೂರು,ಫೆ.13(ಆರ್‍ಕೆ)-ಬಹು ನಿರೀಕ್ಷಿತ ಮೈಸೂರು ಮತ್ತು ಚಾಮರಾಜನಗರ ನಡು ವಿನ ರೈಲು ಮಾರ್ಗ ವಿದ್ಯುದ್ದೀಕರಣಕ್ಕೆ ರೈಲ್ವೆ ಇಲಾಖೆಯು ಮುಂದಾಗಿದೆ. ರೈಲು ಹಳಿ ವಿದ್ಯು ದ್ದೀಕರಣ ಯೋಜನೆಗಾಗಿ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಿ 12 ತಿಂಗಳೊಳಗಾಗಿ ಪೂರ್ಣ ಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಸೆಂಟ್ರಲ್ ಆರ್ಗನೈಸೇಷನ್ ಫಾರ್ ರೈಲ್ವೆ ಎಲೆಕ್ಟ್ರಿಫಿಕೇಷನ್ (ಅಔಖಇ) ಸಂಸ್ಥೆಯು ವಿನ್ಯಾಸ, ಪೂರೈಕೆ, ಎರೆಕ್ಷನ್, ಟೆಸ್ಟಿಂಗ್ ಮತ್ತು ಕಮಿಷನಿಂಗ್ ಕಾರ್ಯಕ್ಕೆ ಈಗಾ ಗಲೇ ಟೆಂಡರ್ ಆಹ್ವಾನಿಸಿದೆ. 71 ಕಿ.ಮೀ. ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲು 20.2 ಕೋಟಿ…