ಬೆಂಗಳೂರು: ಇತ್ತೀಚೆಗಷ್ಟೇ ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಆರಂಭವಾದ ಆರು ಬೋಗಿಯ ರೈಲು ಸಂಚಾರದಿಂದಾಗಿ ಬಿಎಂಆರ್ ಸಿಎಲ್‍ಗೆ ದಾಖಲೆಯ ಆದಾಯ ಬಂದಿದ್ದು, ಸೋಮವಾರ ಒಂದೇ ದಿನದಲ್ಲಿ ಬರೋಬ್ಬರಿ 1.3 ಕೋಟಿ ರೂಪಾಯಿ ಆದಾಯ ಗಳಿಸಿದೆ. ಬಿಎಂಆರ್ ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಎಎಸ್ ಶಂಕರ್ ಅವರ ಪ್ರಕಾರ, ಜುಲೈ 2ರಂದು ಮೆಟ್ರೊದಲ್ಲಿ ಒಟ್ಟು 3,95,356 ಪ್ರಯಾಣಿಕರು ಸಂಚರಿಸಿದ್ದು, ದಾಖಲೆಯ 1,30,61,151 ರೂಪಾಯಿ ಆದಾಯ ಸಂಗ್ರಹವಾಗಿದೆ. ಜ.24ರಂದು 4.11 ಲಕ್ಷ ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸಿರುವುದು ದಾಖಲೆಯಾಗಿದೆ. ಆದರೆ, ಜು.2ರಂದು 3.95…