Tag: Perma Kumari

ಪ್ರೇಮಕುಮಾರಿಗೆ ಹೀನಾಯ ಸೋಲು
ಮೈಸೂರು

ಪ್ರೇಮಕುಮಾರಿಗೆ ಹೀನಾಯ ಸೋಲು

September 4, 2018

ಮೈಸೂರು: ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಪದೇಪದೆ ಆರೋಪಗಳನ್ನು ಮಾಡುತ್ತಲೇ ಪ್ರಚಾರದಲ್ಲಿರುವ ಎಂ.ಪ್ರೇಮ ಕುಮಾರಿ ಜಡೇದ, ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಮಾನವಾಗಿ ಸೋಲುಂಡಿದ್ದಾರೆ. 57ನೇ ವಾರ್ಡ್ (ಕುವೆಂಪುನಗರ) ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್ ಹಾಗೂ ಬಿಜೆಪಿಯ ಘಟಾ ನುಘಟಿ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ್ದರು. ಹೊಲಿಗೆ ಯಂತ್ರ ಚಿಹ್ನೆ ಅವರದ್ದಾಗಿದ್ದು, ಮತದಾರರು ನನ್ನ ಕೈಹಿಡಿಯಲಿದ್ದಾರೆ ಎಂಬ ಆಶಯ ಹೊಂದಿದ್ದರು. ಆದರೆ ಮತದಾರರು ಅವರನ್ನು ಸಂಪೂರ್ಣ ವಾಗಿ ತಿರಸ್ಕರಿಸಿದ್ದು, ಅವರಿಗೆ ಕೇವಲ 16 ಮತಗಳು ಮಾತ್ರ ಬಿದ್ದಿವೆ.

Translate »