Tag: Raghavapura Diary

ರಾಘವಾಪುರ ಡೈರಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ರಾಘವಾಪುರ ಡೈರಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

July 16, 2018

ರಾಘವಾಪುರ:  ರಾಘವಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಜೆ.ಪುಟ್ಟೇಗೌಡ ಹಾಗೂ ಉಪಾಧ್ಯಕ್ಷರಾಗಿ ಮಾದಶೆಟ್ಟಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ರಶೀದ್ ಬೇಗ್ ಪ್ರಕಟಿಸಿದರು.ವಿಜೇತರು ಬಿಜೆಪಿ ಬೆಂಬಲಿತರಾಗಿದ್ದು, ಇವರನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ ಶ್ರೀಕಂಠಪ್ಪ ಹಾಗೂ ತಾಪಂ ಸದಸ್ಯ ಕೆ.ಪ್ರಭಾಕರ್ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಆರ್.ಶಂಭುಲಿಂಗಪ್ಪ, ಸಿದ್ದೇಗೌಡ, ಪ್ರಭಾಕರ್, ಮಹದೇವಯ್ಯ, ಬಸವನಾಯ್ಕ, ಕೆಂಪಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವಾಪುರ ದೇವಯ್ಯ, ಮಹದೇವಶೆಟ್ಟಿ, ಸುಮಿತ್ರಾ, ಪ್ರಮೀಳಾ, ಪಾರ್ವತಿ, ಶಿವಮ್ಮ ಹಾಗೂ ಇತರರು ಇದ್ದರು.

Translate »