Tag: RK Dhawan

ಹಿರಿಯ ಕಾಂಗ್ರೆಸ್ ಮುಖಂಡ ಆರ್.ಕೆ. ಧವನ್ ನಿಧನ
ದೇಶ-ವಿದೇಶ

ಹಿರಿಯ ಕಾಂಗ್ರೆಸ್ ಮುಖಂಡ ಆರ್.ಕೆ. ಧವನ್ ನಿಧನ

August 7, 2018

ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಆರ್. ಕೆ. ಧವನ್ ನಿಧನ ರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.ಧವನ್ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆಪ್ತರಾಗಿದ್ದರು. ಅವರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಇಂದಿರಾಗಾಂಧಿ ಹತ್ಯೆಯ ಪ್ರತ್ಯಕ್ಷದರ್ಶಿ ಕೂಡಾ ಆಗಿದ್ದರು. ಇಂದಿರಾಗಾಂಧಿ ಅವರ ಪ್ರಭಾವದಿಂದಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಧವನ್ ಬಲಾಢ್ಯ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಇಂದಿರಾಗಾಂಧಿ ಹತ್ಯೆ ನಂತರ ಸಿಖ್ ಹತ್ಯಾಕಾಂಡದಲ್ಲಿ ಇವರ ಹೆಸರು ಕೇಳಿಬಂದಿತ್ತು.

Translate »