ಮದ್ದೂರು: ಇತಿಹಾಸ ಪ್ರಸಿದ್ಧ ಶಿವಪುರ ಸತ್ಯಾಗ್ರಹಸೌಧದ ಸಮಗ್ರ ಅಭಿ ವೃದ್ಧಿಗೆ ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭಾ ಅಧ್ಯಕ್ಷೆ ಉಮಾಪ್ರಕಾಶ್ ತಿಳಿಸಿದರು. ಶಿವಪುರ ಸತ್ಯಾಗ್ರಹಸೌಧದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸತ್ಯಾಗ್ರಹ ಸೌಧದಲ್ಲಿ ಸ್ವಚ್ಛತೆ ಕಾಪಾಡಲಾಗುವುದು ಮತ್ತು ನೀರಿನ ಕಾರಂಜಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ 7 ಶುದ್ಧ ಕುಡಿ ಯುವ ನೀರಿನ ಘಟಕ ತೆಗೆಯುವ ಸಂಬಂಧ ಸಚಿವರು ನಮಗೆ…