ಶೃಂಗೇರಿ: ದೇವರು ಮತ್ತು ಶಕುನಗಳಲ್ಲಿ ಅಪಾರ ನಂಬಿಕೆ ಹೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಹೋಮ-ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ ವೇಳೆ ಅಶುಭ, ಶಕುನಗಳು ಎದುರಾಗಿವೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 11 ಈಡುಗಾಯಿಗಳನ್ನು ಹಾಕಬೇಕೆಂದು ಅರ್ಚಕರು ತಿಳಿಸಿದಾಗ ಮುಖ್ಯ ಮಂತ್ರಿಗಳು ಶ್ರದ್ಧಾಭಕ್ತಿಯಿಂದ ಈಡುಗಾಯಿ ಹಾಕಲು ಆರಂಭಿಸಿದರು. ಆದರೆ ಅವರು ಹಾಕಿದ 9ನೇ ಈಡುಗಾಯಿ ಒಡೆಯದೆ ಮೆಟ್ಟಲಲ್ಲಿ ಉರುಳಿ ಹೋಯಿತು. ಅದನ್ನು ಕಂಡು ಕುಮಾರಸ್ವಾಮಿ ಗಾಬರಿ ಗೊಂಡು, ಒಂದು ಕ್ಷಣ…

