Tag: SSLC Supplementary Exams

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ: ಅನುತ್ತೀರ್ಣಗೊಂಡ ವಿದ್ಯಾರ್ಥಿ ನೇಣಿಗೆ ಶರಣು
ಚಾಮರಾಜನಗರ

ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ: ಅನುತ್ತೀರ್ಣಗೊಂಡ ವಿದ್ಯಾರ್ಥಿ ನೇಣಿಗೆ ಶರಣು

July 21, 2018

ಚಾಮರಾಜನಗರ, ಜು.20- ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಯೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ. ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯ ನಿವಾಸಿ ಸಿದ್ದಪ್ಪ ಎಂಬುವವರ ಮಗ ಅಕ್ಷಯ್(17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಗರದ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಕ್ಷಯ್ ಕಳೆದ ಮಾರ್ಚ್‍ನಲ್ಲಿ ನಡೆದಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದನು. ನಂತರ ಇತ್ತೀಚೆಗೆ ನಡೆದ ಪೂರಕ ಪರೀಕ್ಷೆ ಬರೆದಿದ್ದ. ಗುರುವಾರ ಸಂಜೆ ಪೂರಕ ಫಲಿತಾಂಶ ಪ್ರಕಟಗೊಂಡಿತ್ತು. ಅದನ್ನು ನೋಡಿದ ಅಕ್ಷಯ್, ಆ ಪರೀಕ್ಷೆಯಲ್ಲೂ ಅನುತ್ತೀರ್ಣಗೊಂಡಿದ್ದನು….

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು
ಮೈಸೂರು

ಇಂದಿನಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು

June 21, 2018

ಮೈಸೂರು: ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ನಾಳೆ (ಜೂ. 21)ಯಿಂದ 28ರವರೆಗೆ ನಡೆಯಲಿವೆ. ಮೈಸೂರಿನ ಜಯಲಕ್ಷ್ಮಿಪುರಂನ ವಿವೇಕಾನಂದ ಪ್ರೌಢಶಾಲೆ, ಸತ್ಯಸಾಯಿ ಪ್ರೌಢಶಾಲೆ, ಪೀಪಲ್ಸ್ ಪಾರ್ಕ್‍ನ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಎನ್‍ಆರ್ ಮೊಹಲ್ಲಾದ ಸರ್ಕಾರಿ ಹೈಸ್ಕೂಲ್, ಗಾಯಿತ್ರಿಪುರಂನ ಶ್ರೀಕಂಠೇಶ್ವರ ಪ್ರೌಢ ಶಾಲೆ, ಸೇಂಟ್ ಆಂಟೋಣ ಹೈಸ್ಕೂಲ್, ನಜರ್‍ಬಾದಿನ ವಿಭಜಿತ ಮಹಾರಾಜ ಕಾಲೇಜು, ತಿಲಕನಗರದ ಫಾರೂಕಿಯಾ ಹೈಸ್ಕೂಲ್, ಸರಸ್ವತಿಪುರಂನ ಜೆಎಸ್‍ಎಸ್ ಬಾಲಕಿಯರ ಪ್ರೌಢಶಾಲೆ, ಚಾಮುಂಡಿಪುರಂನ ಸೇಂಟ್ ಮೇರಿಸ್ ಹೈಸ್ಕೂಲ್, ವಿದ್ಯಾರಣ್ಯಪುರಂನ ಟಿ.ಎಸ್. ಸುಬ್ಬಣ್ಣ, ಸಾರ್ವಜನಿಕ ಪ್ರೌಢಶಾಲೆ, ಕುವೆಂಪುನಗರದ ಸರ್ಕಾರಿ ಪ್ರೌಢಶಾಲೆ,…

Translate »