Tag: Street dogs

ಬೀದಿ ನಾಯಿಗಳ ದಾಳಿ; ಮಕ್ಕಳು ಸೇರಿ 11 ಜನರಿಗೆ ಗಾಯ
ಹಾಸನ

ಬೀದಿ ನಾಯಿಗಳ ದಾಳಿ; ಮಕ್ಕಳು ಸೇರಿ 11 ಜನರಿಗೆ ಗಾಯ

August 13, 2018

ಅರಕಲಗೂಡು: ಬೀದಿ ನಾಯಿಗಳ ಹಾವಳಿಯಿಂದ 6 ಮಕ್ಕಳು ಸೇರಿದಂತೆ 11 ಮಂದಿ ಗಾಯ ಗೊಂಡಿರುವ ಘಟನೆ ತಾಲೂಕಿನ ಹೆಂಟಗೆರೆ ಕೊಪ್ಪಲಿನಲ್ಲಿ ನಡೆದಿದೆ. ರಚನಾ(4), ಧೃತೀಶ್ (4), ಪುನೀತ್(11), ಕಾವೇರಿ (14) ಅರ್ಜುನ (11), ತಾಯಮ್ಮ(60), ಸೈಯದ್(12) ಸೇರಿದಂತೆ ಇತರರು ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ಯಿಂದ ಗ್ರಾಮದ ಜನತೆ ನಲುಗಿದ್ದು, ಬಹುಬೇಗ ಬೀದಿ ನಾಯಿಗಳನ್ನು ಸೆರೆ ಹಿಡಿದು ಸ್ಥಳಾಂ ತರಿಸುವಂತೆ ಒತ್ತಾಯಿಸಿದ್ದಾರೆ.

Translate »