ಮೈಸೂರು: ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಅಂಗವಾಗಿ ದೇವರಾಜ ಸಂಚಾರ ಠಾಣೆ ವತಿಯಿಂದ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ರೋಟರಿ ಐಡಿಯಲ್ ಜಾವಾ ಶಾಲಾ ವಿದ್ಯಾರ್ಥಿಗಳು ಸಂಚಾರ ನಿಯಮಗಳನ್ನು ಅಗತ್ಯವಾಗಿ ಪಾಲಿಸಿ. ವೇಗದಲ್ಲಿ ವಾಹನ ಚಾಲನೆ ಮಾಡಬೇಡಿ ಹಾಗೂ ಸಾರ್ವಜನಿಕರು ರಸ್ತೆ ದಾಟುವಾಗ ಹಸಿರು ದೀಪವನ್ನು ಗಮನಿಸಿ ದಾಟಬೇಕು ಎಂಬಿತ್ಯಾದಿ ಪೋಸ್ಟರ್ ಮತ್ತು ಭಿತ್ತಿಪತ್ರಗಳನ್ನು ಹಿಡಿದು ಕೆ.ಆರ್.ವೃತ್ತದಿಂದ ಸಾಗಿ ಅರಸು ರಸ್ತೆ, ಜೆಎಲ್ಬಿ ರಸ್ತೆ ಮೂಲಕಸಾಗಿ ಕೆಆರ್ಎಸ್ ರಸ್ತೆಯ ಐಡಿಯಲ್…