ಮೈಸೂರು: ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜು.16ರಂದು ವಿಶ್ವ ಉರಗ ದಿನಾಚರಣೆ ಏರ್ಪಡಿಸಲಾಗಿದೆ. ಉರಗಗಳು ಅದ್ಬುತ ಸೃಷ್ಟಿಯಾಗಿದ್ದು, ನಮ್ಮ ಜಗತ್ತಿನಲ್ಲಿ ಕನಿಷ್ಠ 3 ಸಾವಿರ ವಿವಿಧ ಜಾತಿಯ ಉರಗಗಳು ಭೂಮಂಡಲದಾದ್ಯಂತ ಕಂಡು ಬರುತ್ತವೆ. ಸರೀಸೃಪಗಳ ಸಂರಕ್ಷಣೆಯ ಮಹತ್ವ ಹಾಗೂ ಅಪಾಯದಂಚಿನಲ್ಲಿರುವ ಅವುಗಳ ವಿನಾಶದ ಬಗೆಗಿನ ಕಾರಣಗಳನ್ನು ತಿಳಿದುಕೊಂಡು, ಕಾರ್ಯೋನ್ಮುಖರಾಗುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಂಟಾರ್ಟಿಕಾ ಹೊರತುಪಡಿಸಿ, ಪ್ರಪಂಚದ ಎಲ್ಲಾ ಭಾಗಗಳಲ್ಲಿ ಗರಿಷ್ಠ 32 ಅಡಿ ಉದ್ದ ದಿಂದ ಹಿಡಿದು ಕನಿಷ್ಠ ಸಣ್ಣ ರೀತಿಯ ಉರಗಗಳು ವಾಸವಾಗಿರುವುದು ಕಂಡು ಬರುತ್ತವೆ….