ಮೈಸೂರು: ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ… ಈಸಬೇಕು ಇದ್ದು ಜಯಿಸಬೇಕು… ಆತ್ಮ ಹತ್ಯೆ ಮಹಾಪಾಪ… ಆಪ್ತ ಸಮಾಲೋ ಚನೆ ಪಡೆಯಿರಿ, ಆತ್ಮಹತ್ಯೆ ತಡೆಯಿರಿ… ಹೀಗೆ ಹತ್ತು ಹಲವು ಘೋಷಣೆಗಳು ಮೊಳಗುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಂಯುಕ್ತಾಶ್ರಯ ದಲ್ಲಿ ಗುರುವಾರ ಏರ್ಪಡಿಸಿದ್ದ ಜಾಥಾ ದಲ್ಲಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು…