ಕೊಡಗು

ಬ್ಲೂ ವೇಲ್ ಆಯ್ತು ಇದೀಗ ಬಂದಿದೆ ಮೊಮೊ ಚಾಲೆಂಜ್

September 26, 2018

ಈ ಭಯಾನಕ ಗೇಮ್‍ನಿಂದ ಮಕ್ಕಳನ್ನು ದೂರವಿಡುವಂತೆ ಎಸ್ಪಿ ಮನವಿ
ಮಡಿಕೇರಿ: ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಎಂಬ ಭಯಂ ಕರವಾದ ಗೇಮ್ ಗೆ ಒಳಗಾಗಿ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿ ರುವುದರ ಬಗ್ಗೆ ವರದಿಯಾಗಿದೆ.

ಈ ಮೊಮೊ ಚಾಲೆಂಜ್ ಆನ್ ಲೈನ್ ಗೇಮ್ ಎಂಬ ಆಟವು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಖಾತೆಯನ್ನು ಹೊಂದಿದ್ದು ಪ್ರಾರಂಭದಲ್ಲಿ ಫೇಸ್‍ಬುಕ್‍ನಲ್ಲಿ ಆರಂಭವಾಗಿ ವಾಟ್ಸ್‍ಅಪ್ ಮೂಲಕ ವ್ಯಾಪಕವಾಗಿ ಹರಡಿರುತ್ತದೆ. ಆನ್‍ಲೈನ್ ಆಟವು ಅನಾಮಧೇಯ ಕರೆಗಳನ್ನು ಮಾಡಿ ಮಕ್ಕಳಿಗೆ ಈ ಆಟವನ್ನು ಆಡಲು ಪ್ರೇರಣೆ ನೀಡಿ ತನ್ನ ಪ್ರಭಾವಕ್ಕೆ ಒಳಪಡಿಸಿಕೊಳ್ಳುತ್ತದೆ.
ಆದ್ದರಿಂದ ಜಿಲ್ಲೆಯ ಎಲ್ಲಾ ಪೋಷಕರು ಹಾಗೂ ಶಾಲಾ-ಕಾಲೇಜುಗಳಲ್ಲಿ ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಆಟವನ್ನು ಸಂಪೂರ್ಣವಾಗಿ ತಡೆಯಲು ಈ ಆನ್‍ಲೈನ್ ಆಟದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಎಂಬ ಆಟವನ್ನು ಸಂಪೂ ರ್ಣವಾಗಿ ತಡೆಗಟ್ಟುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪೆನ್ನೇಕರ್ ಅವರು ಕೋರಿದ್ದಾರೆ.

Translate »