ಬೆಂಗಳೂರು,ಡಿ.1(ಕೆಎಂಶಿ)-ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ಬಿಜೆಪಿ ವರಿಷ್ಠರು ಮುಂದಾಗಿರುವ ಬೆನ್ನಲ್ಲೇ ಯಡಿಯೂರಪ್ಪ ಚಾಣಕ್ಯ ರಾಜಕೀಯ ನಡಿಗೆ ಇಟ್ಟಿದ್ದಾರೆ. ಸಂಪುಟ ವಿಸ್ತರಣೆ ಇಲ್ಲವೇ ಪುನಾ ರ್ರಚನೆಗೆ ಅನುಮತಿ ನೀಡಬೇಕೆಂದು ಕಳೆದ 3 ವಾರಗಳ ಹಿಂದೆಯೇ ದೆಹಲಿಗೆ ತೆರಳಿ ವರಿಷ್ಠರಿಗೆ ಮನವಿ ಮಾಡಿ ದ್ದರು. ಆದರೆ ಇದುವರೆಗೂ ಅನುಮತಿ ದೊರೆತಿಲ್ಲ. ವರಿಷ್ಠರ ಹೆಜ್ಜೆಗೆ ಪ್ರತಿ ಹೆಜ್ಜೆ ಇಡುತ್ತಿರುವ ಯಡಿಯೂರಪ್ಪನವರು ಪ್ರತಿ ಹೆಜ್ಜೆಯಲ್ಲೂ ತಮ್ಮ ನಾಯಕತ್ವ ಗಟ್ಟಿ ಮಾಡಿಕೊಳ್ಳಲು ಮುಂದಾಗಿ ದ್ದಾರೆ. ದಿನನಿತ್ಯ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುತ್ತಲೇ ಇದ್ದಾರೆ. ಪತ್ರಕರ್ತರು ಅದೇ ಪ್ರಶ್ನೆ ಕೇಳುವುದನ್ನು ಮಾತ್ರ ಬಿಟ್ಟಿಲ್ಲ. ಆದರೆ ತಮಗೆ ಇರುವ ಅಧಿಕಾರ ಬಳಸಿ, ಕಳೆದ ಒಂದು ವಾರದಲ್ಲಿ 50ಕ್ಕೂ ಹೆಚ್ಚು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿ ಮಾಡಿದ್ದಾರೆ. ಅಲ್ಲದೆ 700ಕ್ಕೂ ಹೆಚ್ಚು ನಿಗಮಗಳ ಸದಸ್ಯರನ್ನು ನೇಮಿಸಿದ್ದಾರೆ. ವರಿಷ್ಠರು ಇನ್ನೇನು ನಾಯಕತ್ವ ಬದಲಾವಣೆ ಮಾಡಬೇಕೆನ್ನುವ ಸಮಯದಲ್ಲೇ ಯಡಿಯೂರಪ್ಪನವರು ಪ್ರತಿತಂತ್ರ ಅನುಸರಿಸುತ್ತಿ ದ್ದಾರೆ. ಚಳಿಗಾಲದ ಅಧಿವೇಶನ ಕರೆದು, ವರಿಷ್ಠರ ನಡೆಗೆ ಬ್ರೇಕ್ ಹಾಕಿದ್ದರು. ಅದಾದ ನಂತರ ಪಂಚಾಯತ್ ರಾಜ್ ಚುನಾ ವಣೆ ರಾಜ್ಯದಲ್ಲಿ ಘೋಷಣೆಯಾಗಿದೆ. ಇದರಿಂದ ಇನ್ನೊಂದು ತಿಂಗಳು ನಾಯ ಕತ್ವ ಬದಲಾವಣೆ ಪ್ರಸ್ತಾಪ ಬರುವುದಿಲ್ಲ. ಅದು ಮುಗಿಯುತ್ತಿದ್ದಂತೆ ಹೊಸ ವರ್ಷ ದಲ್ಲಿ ಜಂಟಿ ಅಧಿವೇಶನ ಕರೆಯುವು ದನ್ನು ಘೋಷಣೆ ಮಾಡಿ, ಅದನ್ನು ಹಾಗೆಯೇ ಮುಂದುವರೆಸಿ, ಬಜೆಟ್ ಅಧಿವೇಶನವನ್ನು ಪೂರ್ಣಗೊಳಿಸುವ ಹುನ್ನಾರ ಮಾಡಿದ್ದಾರೆ. ಮತ್ತೊಂದೆಡೆ ಸಚಿವ ಆಕಾಂಕ್ಷಿಗಳಿಗೆ ಇನ್ನೆರಡು ಮೂರು ದಿನಗಳಲ್ಲೇ ಮಂತ್ರಿಮಂಡಲ ವಿಸ್ತರಿಸುವುದಾಗಿ ಪದೇಪದೆ ಹೇಳಿಕೊಂಡು, ಅವರಿಗೂ ಬೇಸರ ಮೂಡಿಸಿದ್ದಾರೆ. ಯಾರು ಎಷ್ಟೇ ದೆಹಲಿ ಪ್ರವಾಸ ಮಾಡಿ ಬಂದರೂ, ಮಂತ್ರಿ ಸ್ಥಾನ ನೀಡಿಲ್ಲ. ಎಲ್ಲರನ್ನೂ ಮಾಡುತ್ತೇನೆ ಎಂದು ಸಬೂಬು ಹೇಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.