ಮೈಸೂರು

ಮೈಸೂರಲ್ಲಿ ಅತ್ಯುತ್ಸಾಹದ ಯಶಸ್ವಿ ಯೋಗ ದಿನಾಚರಣೆ

June 22, 2021

ಮೈಸೂರು, ಜೂ. 21(ಆರ್‍ಕೆ)- ಕೊರೊನಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮನೆ -ಮನೆಗಳಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಮೈಸೂರಲ್ಲಿ 7ನೇ ಅಂತರ ರಾಷ್ಟ್ರೀಯ ಯೋಗ ದಿನವನ್ನು ಅತ್ಯು ತ್ಸಾಹದಿಂದ ಆಚರಿಸಲಾಯಿತು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಆಯುಷ್ ಇಲಾಖೆ ನಿರ್ದೇಶಕಿ ಡಾ.ಸೀತಾ ಲಕ್ಷ್ಮಿ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಶಾಸಕ ಎಲ್.ನಾಗೇಂದ್ರ ಸೇರಿ ದಂತೆ ಹಲವು ಅಧಿಕಾರಿಗಳು, ಜನಪ್ರತಿ ನಿಧಿಗಳು, ಯೋಗಾಸಕ್ತರು, ವಿವಿಧ ಯೋಗ ತರಭೇತಿ ಸಂಸ್ಥೆಗಳ ಮುಖ್ಯಸ್ಥರು ತಮ್ಮ ನಿವಾಸ, ಯೋಗ ಶಾಲೆಗಳಲ್ಲಿ ಇಂದು ಬೆಳಗ್ಗೆ 7ರಿಂದ 7.45 ಗಂಟೆವರೆಗೆ ಯೋಗ ಪ್ರದರ್ಶನ ಮಾಡಿದರು.

ಆಯುಷ್ ಇಲಾಖೆಯಿಂದ ಮೈಸೂರು ತಾಲೂಕು, ಮಂಡಕಳ್ಳಿ, ವರಕೋಡು, ನಂಜನ ಗೂಡು ತಾಲೂಕಿನ ಮಲೆಯೂರು, ಮಹ ದೇವನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿ ತರು ಯೋಗಾಭ್ಯಾಸ ಮಾಡಿದರು.
ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಚಾಲನ ಕ್ರಿಯೆ, ಆಸನ ಗಳು, ಪ್ರಾಣಾಯಾಮ, ಧ್ಯಾನ, ಸಂಕಲ್ಪ ಮಾಡಿ ಅಂತಿಮವಾಗಿ ಶಾಂತಿ ಮಂತ್ರ ಪಡಿಸುವ ಮೂಲಕ ಯೋಗ ದಿನಾಚರಣೆ ಯನ್ನು ಯಶಸ್ವಿಗೊಳಿಸಲಾಯಿತು.

ಟಾಡಾಸನ್, ವೃಕ್ಷಾಸನ, ಪಾದ ಹಸ್ತಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಉಷ್ಠಾಸನ, ಅರ್ಧ ಉಷ್ಠಾಸನ, ಶಂಕಾ ಸನ, ಉತ್ಥಾನ ಮಂಡೋಕಾಸನ, ಮಕ ರಾಸನ, ಭುಜಂಗಾಸನ, ಶಲಭಾಸನ, ಸೇತು ಭಂದಾಸನ, ಉತ್ಥಾನ ಪಾದಾಸನ, ಅರ್ಧ ಹಾಲಾಸನ, ಪವನ ಮುಕ್ತಾಸನ, ಶವಾಸನಗಳನ್ನು 45 ನಿಮಿಷಗಳಲ್ಲಿ ಪ್ರದರ್ಶಿಸಲಾಯಿತು.

ಜಿಎಸ್‍ಎಸ್‍ಎಸ್ ಯೋಗ ಸಂಸ್ಥೆ ಯಿಂದ ಮೈಸೂರಿನ ಕುವೆಂಪುನಗರದಲ್ಲಿ ನಡೆದ ಯೋಗ ದಿನಾಚರಣೆಯನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು.

ಜಿಎಸ್‍ಎಸ್‍ಎಸ್ ಸಂಸ್ಥೆಯ ಯೋಗ ಗುರು ಶ್ರೀಹರಿ, ಯೋಗ ಫಡರೇಷನ್ ಆಫ್ ಮೈಸೂರ್‍ನ ಭಾಸ್ಕರ್, ಶಶಿಕುಮಾರ್, ಡಾ.ಹರಿಗಣೇಶ ಸೇರಿದಂತೆ ಹಲವರು ಪಾಲ್ಗೊಂಡು ಯೋಗ ಪ್ರದರ್ಶನದ ಪ್ರಾತ್ಯ ಕ್ಷಿಕೆ ನಡೆಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆಯುಷ್ ಕಚೇರಿ, ನೆಹರು ಯುವ ಕೇಂದ್ರ, ಮೈಸೂರು ಮಹಾನಗರ ಪಾಲಿಕೆ ಯೋಗ ಫೆಡ ರೇಷನ್ ಆಫ್ ಮೈಸೂರ್, ಮೈಸೂರು ವಿವಿ ಎನ್‍ಎಸ್‍ಎಸ್ ಘಟಕ ಹಾಗೂ ಜಿಲ್ಲೆಯ ಯೋಗ ತರಭೇತಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮನೆಯಲ್ಲೇ ಯೋಗಾ ಸನ ಮಾಡುವ ಮೂಲಕ ಸಾರ್ವ ಜನಿಕರು ಸಹಕರಿಸಿ, ಆರೋಗ್ಯ ಸಂವರ್ಧನೆಗೆ ಮುಂದಾದರು.

ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ನಿಲಯ, ಮೈಸೂರು ತಾಲೂಕು, ಹಂಚ್ಯಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಸೇರಿದಂತೆ ವಿವಿ ಧೆಡೆ ಯೋಗ ಪ್ರದರ್ಶನ ನಡೆಯಿತು.

ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯಲ್ಲಿ ಹೆಸರು ನೊಂದಾಯಿಸಿ ಕೊಂಡಿದ್ದ ಸುಮಾರು 1,200 ಮಂದಿ ಯೋಗಾಸಕ್ತರೂ ಯೋಗ ಅಭ್ಯಾಸ ಮಾಡಿ ಆನ್‍ಲೈನ್‍ನಲ್ಲಿ ಸಂಪರ್ಕಕ್ಕೆ ಬಂದಿದ್ದರು. ನಾಳೆ(ಜೂ.22) ಸಂಜೆ 6 ಗಂಟೆಯೊಳಗಾಗಿ ಯೋಗಾಭ್ಯಾಸದ ಫೋಟೋಗಳನ್ನು ಕಳುಹಿಸಿದವರಿಗೆ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಯನ್ನು ಜಿಲ್ಲಾಡಳಿತ ಮಾಡಿದೆ.

Translate »