ವಿದ್ಯಾರ್ಥಿಗಳಿಗೆ ಕೌಶಲ್ಯ, ಉದ್ಯೋಗ  ತರಬೇತಿಗೆ ಅನುಕೂಲಕಾರಿಯಾಗಿ ಕೋಡಿಂಗ್ ಅಕಾಡೆಮಿ, ಇನ್‍ಕ್ಯುಬೇಷನ್ ಸ್ಥಾಪನೆ
ಮೈಸೂರು

ವಿದ್ಯಾರ್ಥಿಗಳಿಗೆ ಕೌಶಲ್ಯ, ಉದ್ಯೋಗ ತರಬೇತಿಗೆ ಅನುಕೂಲಕಾರಿಯಾಗಿ ಕೋಡಿಂಗ್ ಅಕಾಡೆಮಿ, ಇನ್‍ಕ್ಯುಬೇಷನ್ ಸ್ಥಾಪನೆ

June 22, 2021

ಮೈಸೂರು,ಜೂ.21(ಎಂಟಿವೈ)-ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾನಿಯದಲ್ಲಿ ಕೋಡಿಂಗï ಅಕಾ ಡೆಮಿ ಹಾಗೂ ಇನ್‍ಕ್ಯುಬೇಷನ್ ಸೆಂಟರ್ ಆರಂಭಿಸಲು ಸರ್ಕಾರ ಸಮ್ಮತಿ ನೀಡಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಮೈಸೂರು ವಿವಿ ಉದ್ಯೋಗಿಗಳಿಗಾಗಿ ಆಯೋಜಿಸಿದ್ದ ಲಸಿಕಾ ಅಭಿಯಾನ ವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಫ್ರಾನ್ಸ್‍ನಲ್ಲಿ ಇಕೋಲ್-42 ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿ ರುವ ಕೋಡಿಂಗ್ ಹಾಗೂ ಇನ್‍ಕ್ಯುಬೇಷನ್ ಸೆಂಟರ್ ಮಾದರಿ ಯಲ್ಲಿ, ಇಕೋಲ್-42 ಸಂಸ್ಥೆಯ ಸಹಯೋಗದಲ್ಲಿಯೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕೋಡಿಂಗï ಅಕಾಡೆಮಿ ಹಾಗೂ ಇನ್‍ಕ್ಯುಬೇಷನ್ ಸೆಂಟರ್ ಆರಂಭಿಸಲು ಉದ್ದೇ ಶಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಒಪ್ಪಿಗೆಯನ್ನೂ ನೀಡಿದೆ. ಈ ಕೇಂದ್ರ ಸ್ಥಾಪನೆಗೆ 10,000 ಚ.ಅಡಿಗಿಂತ ಹೆಚ್ಚಿನ ವಿಸ್ತೀ ರ್ಣದ ಕಟ್ಟಡದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸೆನೆಟ್ ಭವನದ ಮಹಡಿಯನ್ನು ನೀಡಲು ವಿಶ್ವವಿದ್ಯಾನಿಲಯ ಒಪ್ಪಿದೆ. ಶೀಘ್ರವೇ ಈ ಕೇಂದ್ರದ ಸ್ಥಾಪನೆಗೆ ಅಗತ್ಯವಾದ ಸಿದ್ದತಾ ಕಾರ್ಯ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯಕ್ಕೆ ಬದುಕು ಕಟ್ಟಿಕೊಳ್ಳಲು ಬರುವ ವಿದ್ಯಾರ್ಥಿಗಳೇ ಹೆಚ್ಚು. ಅಂತಹವರಿಗೆ ವಿದ್ಯಾ ಭ್ಯಾಸದ ಜೊತೆಗೆ ಉದ್ಯೋಗ ತರಬೇತಿ, ಕೌಶಲ್ಯ ನೀಡುವ ಅವಶ್ಯಕತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಕೋಡಿಂಗ್ ಹಾಗೂ ಇನ್‍ಕ್ಯುಬೇಷನ್ ಸೆಂಟರ್ ಸ್ಥಾಪನೆ ಸಹಕಾರಿ ಯಾಗಲಿದೆ. 2022ರ ವೇಳೆಗೆ ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದರಿಂದ ಸಾಕಷ್ಟು ಬೃಹತ್ ಕೈಗಾರಿಕೆಗಳು ಮೈಸೂರಿಗೆ ಬರುತ್ತವೆ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಹೇರಳವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.

ಇದೇ ವೇಳೆ ಮೈಸೂರು ವಿವಿ ಕುಲಪತಿ ಪೆÇ್ರ.ಜಿ.ಹೇಮಂತ್ ಕುಮಾರ್ ಮಾತನಾಡಿ, ಮೈಸೂರು ವಿವಿಯ ಸಾವಿರ ಸಿಬ್ಬಂದಿಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಅವರು ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸಲು ಸೂಚನೆ ನೀಡಿದ್ದರು. ಸಂಸದ ಪ್ರತಾಪ ಸಿಂಹ ಅವರ ಸಹಕಾರದಿಂದ ಇಂದು ಮೈಸೂರು ವಿವಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.
ಮೈಸೂರು ವಿವಿ ಆವರಣದಲ್ಲಿ ಕೋಡಿಂಗ್ ಹಾಗೂ ಇನ್ ಕ್ಯುಬೇಷನ್ ಸೆಂಟರ್ ಆರಂಭವಾಗುತ್ತಿರುವುದು ಹೆಮ್ಮೆಯ ಸಂಗತಿ. ಸೆನೆಟ್ ಭವನದ ಮೇಲಿನ ಮಹಡಿಯಲ್ಲಿ ಮುಂದಿನ 6 ತಿಂಗಳಲ್ಲಿ ಈ ಕೇಂದ್ರ ಆರಂಭವಾಗಲಿದೆ. ವಿದ್ಯಾರ್ಥಿ ಗಳಿಗೆ ಕೇವಲ ಶಿP್ಷÀಣ ನೀಡಿದರೆ ಸಾಲದು, ಬದುಕು ರೂಪಿಸಿಕೊಳ್ಳುವ ಮಾರ್ಗತೋರಿಸಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ ಹೆಜ್ಜೆ ಹಾಕುವುದು ನಮ್ಮ ಗುರಿ ಹಾಗೂ ಉದ್ದೇಶವೂ ಆಗಿದೆ. ಈ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಸಂಬಂಧಿ ಸಿದ ಕೌಶಲ್ಯದ ತರಬೇತಿ ದೊರೆಯುವುದರಿಂದ ಅವರ ಜೀವನಕ್ಕೆ ಒಂದು ದಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮೈಸೂರು ವಿವಿ ಕುಲಸಚಿವ ಪೆÇ್ರ.ಆರ್. ಶಿವಪ್ಪ, ಸಿಂಡಿಕೇಟ್ ಸದಸ್ಯ ಇ.ಸಿ.ನಿಂಗರಾಜೇಗೌಡ, ವಿವಿಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯ ಡಾ.ಬಸವರಾಜು, ಜಿ¯್ಲÁ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಕೆ.ಹೆಚ್. ಪ್ರಸಾದ್, ಲಸಿಕೆಯ ನೋಡಲï ಅಧಿಕಾರಿ ಡಾ.ಎಲï.ರವಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಗೂ ಇನ್ನಿತರರು ಇದ್ದರು.

Translate »