ಚಾಮರಾಜನಗರ

ಜಾನಪದ ನಗರದಲ್ಲಿ ‘ಮೈಸೂರು ರೇಷ್ಮೆ ಸೀರೆ’ಗಳ ಹಬ್ಬ

March 5, 2020

ಚಾಮರಾಜನಗರ,ಮಾ.4-ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಬುಧವಾರದಿಂದ ಆರಂಭವಾಗಿ ರುವ ‘ಮೈಸೂರು ರೇಷ್ಮೆ ಸೀರೆ’ಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಚಾಲನೆ ನೀಡಿದರು.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದಿಂದ ನಗರದಲ್ಲಿ ಮಾ. 4ರಿಂದ 7ರವರೆಗೆ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಸಲಾಗುತ್ತಿದ್ದು, ಮೇಳಕ್ಕೆ ಅಭೂತಪೂರ್ವ ಚಾಲನೆ ನೀಡಲಾಯಿತು. ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೋಯರ್ ಹರ್ಷಲ್ ನಾರಾಯಣರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಇದ್ದರು.

106 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮವು ಯುಗಾದಿ ಹಬ್ಬ ಸನ್ನಿಹಿತವಾಗುತ್ತಿರು ವುದರಿಂದ ಮೈಸೂರು ರೇಷ್ಮೆ ಸೀರೆ ಪ್ರಿಯರಿಗೆಂದೇ ಈ ವಿಶೇಷ ಪ್ರದರ್ಶನ, ಮಾರಾಟ ಮೇಳವನ್ನು ಆಯೋಜಿಸಿದೆ. ಈಗಾಗಲೇ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಾರಾಟ ಮೇಳಗಳನ್ನು ನಡೆಸಲಾಗಿದೆ.

1000ಕ್ಕೂ ಹೆಚ್ಚಿನ ಸಂಗ್ರಹ: ಜಾನಪದ ನಗರಿಯಲ್ಲಿ ನಡೆಯುತ್ತಿರುವ ಈ ಸೀರೆಗಳ ಹಬ್ಬದಲ್ಲಿ ಸಾವಿರಕ್ಕೂ ಹೆಚ್ಚಿನ ಹಲವು ನಾಜೂಕು ವಿನ್ಯಾಸದ ಮೈಸೂರು ರೇಷ್ಮೆ ಸೀರೆಗಳು ಲಭ್ಯವಿದೆ. ಜರಿಸೀರೆಗಳು, ಕ್ರೇಪ್ ಡಿ ಚೈನ್, ಜಾರ್ಜೆಟ್, ಡಿಜಿಟಲ್ ಹಾಗೂ ಸಾದಾ ಮುದ್ರಿತ ರೀತಿಯ ಆಕರ್ಷ ಣೀಯ ಬಣ್ಣದ ಸುಮಾರು ಸಾವಿರಕ್ಕೂ ಹೆಚ್ಚು ಸೀರೆಗಳು ಪ್ರದರ್ಶನದಲ್ಲಿವೆ. ಜತೆಗೆ ನವನವೀನ ವಿವಾಹ ಸಂಗ್ರಹ ಸೀರೆಗಳನ್ನು ಪರಿಚಯಿಸಲಾಗಿದೆ. ಸೀರೆಗಳ ವೈಭವದ ಜತೆಗೆ ಮೈಸೂರು ರೇಷ್ಮೆಯಿಂದ ತಯಾರಿಸಲಾದ ಟೈ, ಸ್ಕಾರ್ಫ್ ಹಾಗೂ ಶರ್ಟ್‍ಗಳು ಸಹ ಪ್ರದರ್ಶನದಲ್ಲಿದೆ.

ಶೇ.25ರವರೆಗೆ ರಿಯಾಯಿತಿ: ಮೇಳದಲ್ಲಿ 6 ಸಾವಿರ ರೂ. ಗಳಿಂದ 75 ಸಾವಿರ ರೂ. ವರೆಗಿನ ರೇಷ್ಮೆ ಸೀರೆಗಳನ್ನು ಮಾರಾಟಕ್ಕಿಡಲಾಗಿದೆ. ಇದರ ಜತೆಗೆ ಗ್ರಾಹಕರಿಗೆ ಅನುಕೂಲವಾಗಲೆಂದು ಸೀರೆಗಳ ಮೇಲೆ ಶೇ.25 ರವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.

ಮೈಸೂರು ರೇಷ್ಮೆ ಪ್ರಿಯರಿಗೆ ಈ ಪ್ರದರ್ಶನ ಹಾಗೂ ಮಾರಾಟ ಮೇಳ ಹಬ್ಬವನ್ನುಂಟು ಮಾಡಿರುವುದಲ್ಲದೇ, ಮಹಿಳಾಮಣಿಯರ ಮೊಗದಲ್ಲಿ ಸಂತಸ ಮೂಡಿಸಿರುವುದರಲ್ಲಿ ಸಂದೇಹವೇ ಇಲ್ಲ.

ಮೈಸೂರು ರೇಷ್ಮೆ ಸೀರೆಯ ವಿಶೇಷತೆ
ಭಾರತದಲ್ಲಿ ದೊರೆಯುವ ಇತರ ರೇಷ್ಮೆ ವಸ್ತ್ರಗಳಿಗಿಂತ ಮೈಸೂರು ಸಿಲ್ಕ್ ವಿಭಿನ್ನವಾಗಿದ್ದು, ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲಾಗುತ್ತದೆ. ಇದು ಬಟ್ಟೆಗಳಿಗೆ ವಿಶೇಷ ಹೊಳಪು ನೀಡುವು ದಲ್ಲದೇ, ಭೌಗೋಳಿಕ ಸುವಾಸನೆ ನೀಡುತ್ತದೆ. ಮೈಸೂರು ಸಿಲ್ಕ್‍ಗೆ ಉಪಯೋಗಿಸುವ ರೇಷ್ಮೆಯು ಪರಿಶುದ್ಧವಾಗಿದ್ದು, ಜರಿಯನ್ನು ಪರಿಶುದ್ಧ ಚಿನ್ನ ಬಳಸಿ ತಯಾರಿಸಲಾಗುತ್ತದೆ. ಜರಿಗಳ ವಿನ್ಯಾಸದಲ್ಲಿ ಶೇ. 0.65ರಷ್ಟು ಚಿನ್ನ ಹಾಗೂ ಶೇ.65ರಷ್ಟು ಬೆಳ್ಳಿಯನ್ನು ಬಳಸಿ ಮಾಡಲಾಗುತ್ತದೆ. ಸೀರೆಗಳಲ್ಲಿ ಜರಿಗಳು ಹೆಚ್ಚಿ ದಂತೆ ಸೀರೆ ಬೆಲೆಯೂ ಅಧಿಕವಾಗುತ್ತದೆ.

ಈ ಎಲ್ಲಾ ವೈಶಿಷ್ಟತೆಯ ಕಾರಣದಿಂದ ಮೈಸೂರು ಸಿಲ್ಕ್‍ಗೆ ಭೌಗೋಳಿಕ ಗುರುತಿನ ನೋಂದಣಿ ಸಹ ಲಭಿಸಿದೆ. ಕರ್ನಾಟಕ ರೇಷ್ಮೆ ಉದ್ಯಮ ಗಳ ನಿಗಮವು ಮೈಸೂರು ಸಿಲ್ಕ್‍ನ ಏಕೈಕ ಮಾಲಿತ್ವ ಹೊಂದಿದ್ದು, ನೂಲು ತೆಗೆಯುವುದ ರಿಂದ ನೇಯ್ಗೆವರೆಗೂ ಒಂದೇ ಸೂರಿನಡಿ ಎಲ್ಲಾ ಉತ್ಪಾದನಾ ಹಂತಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ. ಇದರಿಂದ ಕರ್ನಾಟಕದ ಅತ್ಯುತ್ತಮ ಸಾರ್ವಜನಿಕ ವಲಯಗಳ ಉದ್ದಿಮೆಗಳಿಗೆ ನೀಡಲಾಗುವ ‘ಮುಖ್ಯಮಂತ್ರಿ ವಾರ್ಷಿಕ ರತ್ನ’ ಪ್ರಶಸ್ತಿ ಯನ್ನು ಮೂರು ಬಾರಿ ತನ್ನದಾಗಿಸಿಕೊಂಡಿದೆ.

Translate »