ಗೋಣಿಕೊಪ್ಪ,ಮಾ.4-ಅರಣ್ಯ ಇಲಾಖೆ ಅಧಿಕಾರಿಗಳ ನೇಮಕ ಪ್ರಕಿಯೆಯಲ್ಲಿ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳ ಮೀಸಲಾತಿ ಯನ್ನು ಕಡಿತಗೊಳಿಸಿರುವ ಕ್ರಮವನ್ನು ಖಂಡಿಸಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ವಿದ್ಯಾರ್ಥಿಗಳು ಪೊನ್ನಂಪೇಟೆ ಯಲ್ಲಿ ಪ್ರತಿಭಟನೆ ನಡೆಸಿದರು.
ಬೇರೆಯವರಿಗೆ ಅವಕಾಶ ಮಾಡಿ ಕೊಡಲು ನಮ್ಮ ಭವಿಷ್ಯದ ಜೊತೆ ಆಟವಾ ಡುತ್ತಿರುವುದು ಸರಿಯಲ್ಲ. ಇದರಿಂದಾಗಿ ಶೇ. ಮೀಸಲಾತಿ ನಮಗೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.
ಡಿಆರ್‍ಎಫ್‍ಒ, ಅರ್‍ಎಫ್‍ಒ ಹಾಗೂ ಎಸಿಎಫ್ ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಓದಿರುವ ವಿದ್ಯಾರ್ಥಿಗಳಿಗೆ ಶೇ. 75 ರಷ್ಟು ಮೀಸಲಾತಿ ನೀಡಿತ್ತು. ಇದರಿಂದಾಗಿ ಅರಣ್ಯ ಶಾಸ್ತ್ರದಲ್ಲಿಯೇ ಅಧ್ಯಯನ ನಡೆಸಿ ದವರಿಗೆ ಉಪಯೋಗವಾಗುತ್ತಿತ್ತು. ಆದರೆ ಇದೀಗ ಇದರ ಮಿತಿಯನ್ನು ಶೇ. 50 ಇಳಿಸಿರುವುದರಿಂದ ಅರಣ್ಯ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ತೊಂದರೆ ಯುಂಟಾಗಲಿದೆ.
ವಿದ್ಯಾರ್ಥಿನಿ ಸೌಂದರ್ಯ ಮಾತನಾಡಿ, ನಾವು ಗುಣಮಟ್ಟದ ಶಿಕ್ಷಣ ಪಡೆದು ಅರಣ್ಯ ಸಂರಕ್ಷಣೆಗೆ ಪೂರಕವಾಗಿ ಜ್ಞಾನ ಹೆಚ್ಚಿಸಿಕೊಂಡಿದ್ದೇವೆ. ಇದಕ್ಕಾಗಿ ನಮ್ಮ ವಿದ್ಯಾರ್ಥಿ ಜೀವನವನ್ನೇ ಮುಡಿಪಾಗಿ ಟ್ಟಿದ್ದೇವೆ. ಉತ್ತಮ ಅಧ್ಯಯನದ ಮೂಲಕ ಅರಣ್ಯ ಶಾಸ್ತ್ರದಲ್ಲಿ ಉತ್ತಮ ಅಧಿಕಾರಿ ಯಾಗಬೇಕು ಎಂಬ ಉದ್ದೇಶ ಇಟ್ಟು ಕೊಂಡಿದ್ದೇವೆ. ಶಿಕ್ಷಣದ ನಂತರ ಹುದ್ದೆ ಗ್ಯಾರಂಟಿ ಎಂಬ ನಂಬಿಕೆ ನಮ್ಮದು. ಆದರೆ, ಸರ್ಕಾರ ಮೀಸಲಾತಿಯನ್ನು ಶೇ. 50 ಕ್ಕೆ ಇಳಿಸಿರುವ ಕ್ರಮ ಸರಿಯಲ್ಲ. ಇದನ್ನು ವಿರೋಧಿಸಲು ನಾವು ಶೇ.100 ಮೀಸಲಾತಿ ಕೇಳಲು ಹೋರಾಟ ನಡೆಸು ವುದಾಗಿ ತಿಳಿಸಿದರು.
ಕಾಲೇಜು ಆವರಣದಿಂದ ಮೆರವಣಿಗೆ ಯಲ್ಲಿ ಬಂದ ವಿದ್ಯಾರ್ಥಿಗಳು ಬಸವೇಶ್ವರ ದೇವಸ್ಥಾನ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮವನ್ನು ಖಂಡಿಸಿದರು. ನಂತರ ರಾಮಕೃಷ್ಣ ಶಾರದಾಶ್ರಮದವರೆಗೆ ಮೆರವಣಿಗೆ ತೆರಳಿ ಪಟ್ಟಣದಲ್ಲಿ ಕಸ ಹೆಕ್ಕಿ ಸಾರ್ವಜನಿಕರ ಗಮನ ಸೆಳೆದರು. ಪ್ರತಿ ಭಟನೆ ಕೇವಲ ತರಗತಿಯಿಂದ ಹೊರ ಗುಳಿ ಯುವುದು ಮಾತ್ರವಲ್ಲ. ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ವಿದ್ಯಾರ್ಥಿಗಳು ಈ ಸಂದರ್ಭ ಘೋಷಿಸಿದರು. ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.