ಉತ್ತಮ ಆಹಾರ ಸೇವನೆಯಿಂದ ಮಧುಮೇಹ ನಿಯಂತ್ರಣ
ಕೊಡಗು

ಉತ್ತಮ ಆಹಾರ ಸೇವನೆಯಿಂದ ಮಧುಮೇಹ ನಿಯಂತ್ರಣ

March 5, 2020

ವಿರಾಜಪೇಟೆ.ಮಾ,4-ಉತ್ತಮ ಆಹಾರ ಸೇವನೆಯಿಂದ ಮಧುಮೇಹ ಖಾಯಿಲೆ ಗುಣಪಡಿಸಲು ಸಾಧ್ಯ. ಎಂದು ಅಮೇರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾದಲ್ಲಿ ವೈದ್ಯಕೀಯ ವೃತ್ತಿ ಹೊಂದಿರುವ ಪುತ್ತೂರು ನಿವಾಸಿ ಡಾ||.ಸಂದೀಪ್ ಎಸ್.ನಾಯಕ್ ಹೇಳಿದ್ದಾರೆ.

ಅವರು ಇಂದು ವಿರಾಜಪೇಟೆಗೆ ಸಮೀಪದ ಅರಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ 196ನೇ ಕಿರಣದಲ್ಲಿ “ಮಧುಮೇಹ ಖಾಯಿಲೆ-ಅರಿವು ಮತ್ತು ಪರಿಹಾರ ವಿಷಯವಾಗಿ ಉಪನ್ಯಾಸ ನೀಡಿದರು. “ಸರಕಾರಗಳ ಮುಂದಾಲೊಚನೆ ಮತ್ತು ಗೊತ್ತು ಗುರಿಯಿಲ್ಲದ ಯೋಜನೆಗಳಿಂದಾಗಿ ಆಧುನಿಕ ರೋಗಗಳು ಹೆಚ್ಚಾಗುತ್ತಿವೆ. ಮಧುಮೇಹ ಖಾಯಿಲೆಯ ಕುರಿತು ಮೌಢ್ಯತೆ ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಸಕ್ಕರೆ ಆಧಾರಿತ ಆಹಾರ ಪದ್ಧತಿಯನ್ನು ಗರಿಷ್ಟ ತೊರೆಯಬೇಕು. ಪ್ರಕೃತಿ ದತ್ತ ಆಹಾರ ಪದ್ಧತಿಯೆಡೆಗೆ ಸಾಗಬೇಕು. ಮೂರು ವರ್ಷಗಳ ಹಿಂದಿನ ಸಮೀ ಕ್ಷೆಯ ಪ್ರಕಾರ ಭಾರತದಲ್ಲಿ 8 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಇದು ದ್ವಿಗುಣ ಗೊಳ್ಳುವ ಸಾಧ್ಯತೆ ಇದೆ. ಬದಲಾದ ಜೀವನ ಶೈಲಿ, ರೋಗದ ಬಗೆಗಿನ ಅವೈಜ್ಞಾನಿಕ ಕಲ್ಪನೆಗಳು ರೋಗದೆಡೆಗೆ ಕೊಂಡೊಯ್ಯುತ್ತದೆ ಎಂದರು.

ದೇಶಕ್ಕೆ ಶಾಸನಗಳನ್ನು ನಿರ್ಮಿಸಬೇಕಾದವರು ಜನರಿಗೆ ಅಗತ್ಯ ಶಾಸನಗಳನ್ನು ನಿರ್ಮಿಸುತ್ತಿಲ್ಲ. ಸರಕಾರಗಳು ನೀಡುತ್ತಿರುವ ಅವೈಜ್ಞಾನಿಕ ಉಪದೇಶಗಳು ಪ್ರಸಕ್ತ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ಮುಂದೆ ದುರಂತದೆಡೆಗೆ ಕೊಂಡೊಯ್ಯುತ್ತದೆ. ಸರಕಾರಗಳು ಶಾಸನ ರಚಿಸುವಾಗ ವೈಜ್ಞಾನಿಕ ಮನೋಭಾವವನ್ನು ಅಳವಡಿಸ ಬೇಕು. ಗಾಂಧಿಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಗೆ ಒತ್ತುಕೊಟ್ಟು ಕಾನೂನುಗಳನ್ನು ನಿರ್ಮಿಸಿದಲ್ಲಿ ಆರೋಗ್ಯ ಪೂರ್ಣ ಸಮಾಜವು ನಿರ್ಮಾಣವಾಗುತ್ತದೆ. ಮಧುಮೇಹ ರೋಗಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ವೈಜ್ಞಾನಿಕ ಆಹಾರ, ವ್ಯಾಯಾಮ ಮತ್ತು ಆರೋಗ್ಯ ಪೂರ್ಣ ನಿದ್ರೆಯಿಂದ ಸ್ವಸ್ಥತೆ ಲಭಿಸುತ್ತದೆ ಎಂದು ಹೇಳಿದರು.

ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, “ಆರೋಗ್ಯಪೂರ್ಣ ಸಮಾಜದಲ್ಲಿ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಆದುದರಿಂದ ಸರಕಾರಗಳು ಜನತೆಯ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಟ್ಟು ಕಾನೂನುಗಳನ್ನು ನಿರ್ಮಿಸಲಿ ಎಂದರು. ಶ್ರೀಕಾಂತ್‍ರಾವ್ ಉಪಸ್ಥಿತರಿದ್ದರು. ಸಿಂಧುರ ಸ್ವಾಗತಿಸಿÀದರು. ಡಾ||.ಎಸ್.ವಿ.ನರಸಿಂಹನ್ ಧನ್ಯವಾದವಿತ್ತರು.

Translate »