ಮೈಸೂರು: 14ನೇ ಹಣಕಾಸು ಯೋಜನೆಯ 9.80 ಲಕ್ಷ ರೂ. ಹಣ ದುರುಪಯೋಗ ಆರೋಪದ ಮೇರೆಗೆ ರಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ಧ ಮೈಸೂರು ದಕ್ಷಿಣ (ಗ್ರಾಮಾಂತರ) ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ರಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಖಾ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮೈಸೂರಿನ ವಿಜಯನಗರದಲ್ಲಿರುವ ಫ್ಯಾಷನ್ ಹಟ್ಸ್ ಅಂಗಡಿ ಮಾಲೀಕ ಮಂಜು ಮತ್ತು ಎಂ.ಲಿಂಗರಾಜ ಸ್ವಾಮಿ ಎಂಬುವರು 9.80 ಲಕ್ಷ ರೂ. ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ…