ಮೈಸೂರು: ಕಾರು ಅಪಘಾತದಲ್ಲಿ ಗಾಯ ಗೊಂಡು ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ನಟ ದರ್ಶನ್ ಇಂದು ಮಧ್ಯಾಹ್ನ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯಿಂದ ಬಿಡುಗಡೆಯಾದರು. ಮಧ್ಯಾಹ್ನ 3.45 ಗಂಟೆ ವೇಳೆಗೆ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ಎದುರಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದರ್ಶನ್, ಊಟ ಮಾಡಿ ಬರುತ್ತಿದ್ದಾಗ ರಿಂಗ್ ರಸ್ತೆ ತಿರುವಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು ಎಂದರು. ನಾನೂ ಸೇರಿದಂತೆ ನಾಲ್ವರಿಗೆ ಗಾಯಗಳಾಗಿತ್ತು. ನನ್ನ ಕಾರಿನಲ್ಲಿ ಐವರು ಕೂರಲು ಅವಕಾಶವಿದೆ. ನಾವು ಐವರಷ್ಟೇ ಕಾರಿನಲ್ಲಿದ್ದೆವು, ನನ್ನ…