ಕೇಂದ್ರದಿಂದ ಯೋಜನೆಗೆ ಶೇ.20ರಷ್ಟು ಅನುದಾನ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫನ್ ಭರವಸೆ ಮೈಸೂರು: ಚುನಾಯಿತ ಪ್ರತಿ ನಿಧಿಗಳು, ಪರಿಸರವಾದಿಗಳು ಹಾಗೂ ಸಮಸ್ತ ಕೊಡಗಿನ ಜನತೆಯ ವಿರೋಧದ ನಡುವೆಯೂ ದಕ್ಷಿಣ ಕೊಡಗಿನ ಮೂಲಕ ಹಾದು ಹೋಗುವ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನ ಗೊಳ್ಳುವ ಮುನ್ಸೂಚನೆಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಆಲ್ಫನ್ ನೀಡಿದ್ದಾರೆ. ಕೇರಳದ ಕಲ್ಪೆಟ್ಟದಲ್ಲಿ ವೈನಾಡು ಛೇಂಬರ್ ಆಫ್ ಕಾಮರ್ಸ್, ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಮತ್ತು ವೈನಾಡು ಪ್ರವಾ ಸೋದ್ಯಮ ಸಂಘದ…