ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲ್ವೆ ಯೋಜನೆ
ಕೊಡಗು, ಮೈಸೂರು

ಕೊಡಗಿನ ಮೂಲಕ ಮೈಸೂರು-ತಲಚೇರಿ ರೈಲ್ವೆ ಯೋಜನೆ

July 5, 2018
  • ಕೇಂದ್ರದಿಂದ ಯೋಜನೆಗೆ ಶೇ.20ರಷ್ಟು ಅನುದಾನ
  • ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ.ಆಲ್ಫನ್ ಭರವಸೆ

ಮೈಸೂರು: ಚುನಾಯಿತ ಪ್ರತಿ ನಿಧಿಗಳು, ಪರಿಸರವಾದಿಗಳು ಹಾಗೂ ಸಮಸ್ತ ಕೊಡಗಿನ ಜನತೆಯ ವಿರೋಧದ ನಡುವೆಯೂ ದಕ್ಷಿಣ ಕೊಡಗಿನ ಮೂಲಕ ಹಾದು ಹೋಗುವ ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆ ಅನುಷ್ಠಾನ ಗೊಳ್ಳುವ ಮುನ್ಸೂಚನೆಯನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಜೆ.ಆಲ್ಫನ್ ನೀಡಿದ್ದಾರೆ.

ಕೇರಳದ ಕಲ್ಪೆಟ್ಟದಲ್ಲಿ ವೈನಾಡು ಛೇಂಬರ್ ಆಫ್ ಕಾಮರ್ಸ್, ಜಿಲ್ಲಾ ಪ್ರವಾಸೋದ್ಯಮ ಪ್ರಚಾರ ಮಂಡಳಿ ಮತ್ತು ವೈನಾಡು ಪ್ರವಾ ಸೋದ್ಯಮ ಸಂಘದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ `ವೈನಾಡಿನಲ್ಲಿ ಪ್ರವಾಸೋ ದ್ಯಮ ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇರಳದಿಂದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಎರಡು ರೈಲ್ವೆ ಯೋಜನೆಗಳಿಗೆ ಶೇ.20ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಭರಿಸುವುದಾಗಿ ಹೇಳಿದೆ ಎಂದು ತಿಳಿಸಿದರು.

ಕೇರಳದ ನೆಲಂಬೂರ್‍ನಿಂದ ಸುಲ್ತಾನ್ ಬತೇರಿ-ನಂಜನಗೂಡು ರೈಲ್ವೆ ಯೋಜನೆ ಹಾಗೂ ತಲಚೇರಿ-ದಕ್ಷಿಣ ಕೊಡಗು-ಮೈಸೂರು ರೈಲ್ವೆ ಯೋಜನೆಗಳಿಗಾಗಿ ಕೇರಳ ಸರ್ಕಾರದ ಒತ್ತಾಯವಿದ್ದು, ಈ ಯೋಜನೆ ಗಳ ಅನುಷ್ಠಾನಕ್ಕೆ ತಾವು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸುಮಾರು 181 ಕಿ.ಮೀ. ಉದ್ದದ 5000.03 ಕೋಟಿ ಅಂದಾಜು ವೆಚ್ಚದ ತಲಚೇರಿ-ಮೈಸೂರು ಮಾರ್ಗ ಯೋಜನೆ ಜೊತೆಗೆ ನೆಲಂಬೂರು-ಸುಲ್ತಾನ್ ಬತೇರಿ-ನಂಜನಗೂಡು ಯೋಜನೆಯೂ ಅನುಷ್ಠಾನ ಗೊಂಡರೆ ಕೇರಳ ಜನತೆಯ ಕನಸು ಈಡೇರಿ ದಂತಾಗುತ್ತದೆ ಎಂದು ಸಚಿವರು ಹೇಳಿದರು.

ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು ತಲಚೇರಿ-ಮೈಸೂರು ರೈಲ್ವೆ ಮಾರ್ಗ ಯೋಜನೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಈ ಯೋಜನೆಯನ್ನು ಪರಿ ಷ್ಕರಿಸಿ ಕಣ್ಣೂರು-ಸೀಪೋರ್ಟ್-ವೈನಾಡು- ಕೂರ್ಗ್-ಮೈಸೂರು ರೈಲು ಮಾರ್ಗ ಎಂದು ನಾಮಕರಣ ಮಾಡಲಾಗಿದೆ. ಈ ಯೋಜ ನೆಯು ಮಾನಂದವಾಡಿಯಿಂದ ಕೋಜಿ ಕೋಡ್ ನಂತರ ಅಲ್ಲಿಂದ ದಕ್ಷಿಣ ಕೊಡಗು ಮೂಲಕ ಮೈಸೂರಿಗೆ ಸಂಪರ್ಕ ಕಲ್ಪಿಸಲಿದೆ ಎಂದರು.

ಕೇರಳ ಸರ್ಕಾರವು ವಿವಾದಿತ ತಲಚೇರಿ- ಮೈಸೂರು ರೈಲು ಮಾರ್ಗ ಮಾತ್ರವಲ್ಲದೆ, ಕೇರಳದಿಂದ ಬೆಂಗಳೂರಿಗೆ ಅತೀ ಕಡಿಮೆ ಅಂತರದ ನೆಲಂಬೂರು-ಸುಲ್ತಾನ್ ಬತ್ತೇರಿ- ನಂಜನಗೂಡು ರೈಲ್ವೆ ಮಾರ್ಗಕ್ಕೂ ಒತ್ತಾಯಿ ಸುತ್ತಿದೆ. ಈ ಮಾರ್ಗವು ಬಂಡೀಪುರ ಹುಲಿ ಸಂರಕ್ಷಣಾ ವಲಯ, ಮಧುಮಲೈ ಮತ್ತು ಮಸಿನಗುಡಿ ಅರಣ್ಯದ ಮೂಲಕ ಹಾದು ಹೋಗಲಿದ್ದು, ಸಾವಿರಾರು ಎಕರೆ ಅರಣ್ಯ ಮತ್ತು ಆನೆಗಳ ವಾಸ ಸ್ಥಾನವನ್ನು ನಾಶ ಮಾಡುವ ಅಪಾಯವಿದೆ.

ರೈಲ್ವೆ ಮೂಲಗಳ ಪ್ರಕಾರ ಕೇರಳ ಸರ್ಕಾ ರವು ನೆಲಂಬೂರು-ನಂಜನಗೂಡು ರೈಲ್ವೆ ಮಾರ್ಗದ ಸಮಗ್ರ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕೇರಳಾ ರೈಲ್ವೆ ಅಭಿವೃದ್ಧಿ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‍ಡಿಸಿಎಲ್)ಗೆ ವಹಿಸಿದೆ. ಇದಕ್ಕೂ ಮುನ್ನ ಈ ಯೋಜನೆಯ ಡಿಪಿಆರ್ ತಯಾರಿಸಲು ದೆಹಲಿ ಮೆಟ್ರೋ ರೈಲ್ವೆ ಕಾರ್ಪೊರೇಷನ್ (ಡಿಎಂಆರ್‍ಸಿ)ಗೆ ನೀಡ ಲಾಗಿತ್ತು.

ಡಿಎಂಆರ್‍ಸಿಯು ಕೇರಳ ಮತ್ತು ಕರ್ನಾಟಕದ ಪಕ್ಷಿಧಾಮ ಹಾಗೂ ಅರಣ್ಯ ಸರ್ವೆ ಕಾರ್ಯನಡೆಸಲು ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ದಿಂದ ಅನುಮತಿ ಪಡೆಯಲು ವಿಫಲವಾದ ಕಾರಣ ಆ ಸಂಸ್ಥೆಗೆ ನೀಡಿದ್ದ ಡಿಪಿಆರ್ ತಯಾ ರಿಸುವ ಕೆಲಸವನ್ನು ಹಿಂಪಡೆಯಲಾಗಿದೆ.

ಈ ಯೋಜನೆಯ ಡಿಪಿಆರ್ ತಯಾ ರಿಸುವ ಕಾರ್ಯವನ್ನು ಡಿಎಂಆರ್‍ಸಿ ಸಂಸ್ಥೆ ನಡೆಸುತ್ತಿದ್ದ ವೇಳೆ ಅದರ ಮುಖ್ಯ ಸಲಹೆ ಗಾರರಾಗಿದ್ದ ಇ.ಶ್ರೀಧರನ್ ಅವರು ಮಾತ ನಾಡಿ, ನೆಲಂಬೂರು-ನಂಜನಗೂಡು ರೈಲ್ವೆ ಮಾರ್ಗವನ್ನು ಬಂಡೀಪುರ ವನ್ಯ ಜೀವಿಗಳಿಗೆ ಯಾವುದೇ ತೊಂದರೆಯಾಗ ದಂತೆ ಪೂರ್ಣಗೊಳಿಸಬಹುದು. ಟನ್ನಲ್ ಬೋರಿಂಗ್ ಮಿಷನ್ ಮೂಲಕ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಪ್ರಸ್ತಾ ವನೆ ಸಲ್ಲಿಸಲಾಗಿದ್ದು, ಕಡಿಮೆ ಪ್ರಮಾಣದ ಪರಿಸರ ಹಾನಿಯಾಗಲಿದೆ ಎಂದರು.
ಕೇರಳ ಸರ್ಕಾರವು ನೆಲಂಬೂರು-ನಂಜ ನಗೂಡು ಹಾಗೂ ತಲಚೇರಿ-ಮೈಸೂರು ಮತ್ತು ಚಾಮರಾಜನಗರ-ಮೆಟ್ಟುಪಾಳ್ಯಂ ರೈಲ್ವೆ ಯೋಜನೆಗಳಿಗೆ ಒತ್ತಾಯ ಮಾಡುತ್ತಿದ್ದು, ಈ ಯೋಜ ನೆಗಳಿಂದ ಕರ್ನಾಟಕ- ಕೇರಳ-ತಮಿಳು ನಾಡು ರಾಜ್ಯಗಳ ನಡುವಿನ ಪ್ರಯಾಣದ ವೇಳೆಯನ್ನು ಕಡಿಮೆ ಮಾಡಬಹುದು ಹಾಗೂ ಕೇರಳ ರಾಜ್ಯದ ವಾಣಿಜ್ಯಾಭಿವೃದ್ಧಿಗೆ ಈ ಯೋಜನೆಗಳು ಸಹಕಾರಿ ಯಾಗುತ್ತದೆ ಎಂಬುದು ಕೇರಳ ಸರ್ಕಾ ರದ ಅಭಿಪ್ರಾಯವಾಗಿದೆ.

Translate »