ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಆರ್ಭಟ
ಕೊಡಗು

ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಆರ್ಭಟ

June 23, 2018

ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಮುಂದುವರೆ ದಿದ್ದು ರೈತರ ಜಾನುವಾರುಗಳನ್ನು ಪ್ರತಿ ದಿನ ಕೊಂದು ಹಾಕುತ್ತಿದೆ. ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆಮ್ಮಲೆ ಗ್ರಾಮದ ನಿವಾಸಿ ಕುಂಞಂಗಡ ಸಿದ್ದು, ಸಿದ್ದಾರ್ಥ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಲಾಗಿದ್ದ ಗಬ್ಬ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಈ ಹಸು ಇನ್ನು ಮೂರು ದಿನದಲ್ಲಿ ಈ ಹಸುವು ಕರುವನ್ನು ಹಾಕುವ ಸಂಭ ವವಿತ್ತು. ಮುಂಜಾನೆಯ ವೇಳೆಯಲ್ಲಿ ಲಗ್ಗೆ ಯಿಡುವ ಹುಲಿಯು ಹಸುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಮುಂಜಾನೆ ಕೊಟ್ಟಿಗೆಗೆ ಹಾಲು ಕರೆಯಲು ಮನೆ ಮಾಲೀಕ ಆಗಮಿ ಸಿದ ಸಂದರ್ಭ ಘಟನೆ ಬೆಳಕಿಗೆ ಬಂದಿದೆ.

ಬುಧವಾರ ಮುಂಜಾನೆ ಸಮೀಪದ ಬೀರುಗ ಗ್ರಾಮದ ನಿವಾಸಿ ಅಜ್ಜಮಾಡ ವಿಜು ಕಾರ್ಯಪ್ಪನವರ ಎರಡು ಹಾಲು ಕರೆಯುವ ಹಸುವಿನ ಮೇಲೆ ದಾಳಿ ನಡೆ ಸಿರುವ ಹುಲಿಯು ಎರಡು ಹಸುಗಳನ್ನು ಕೊಂದು ಹಾಕಿತ್ತು. ಈ ಭಾಗದಲ್ಲಿ ಹುಲಿ ಸೆರೆಗೆ ಬೋನ್‍ಅನ್ನು ಅಳವಡಿಸಿದ್ದ ಅರಣ್ಯ ಸಿಬ್ಬಂದಿಗಳು ರಾತ್ರಿಯಿಡಿ ಸಮೀಪದ ಕೊಟ್ಟಿಗೆ ಬಳಿ ಸ್ಥಳೀಯರ ಸಹಕಾರದಿಂದ ಹುಲಿ ಆಗಮನದ ನಿರೀಕ್ಷೆಯಲ್ಲಿದ್ದರು. ಆದರೆ ಹುಲಿಯು ಬೋನು ಇರಿಸಿದ್ದ ಸ್ಥಳಕ್ಕೆ ಆಗ ಮಿಸದೆ ಸಮೀಪದ ನೆಮ್ಮಲೇ ಗ್ರಾಮದತ್ತ ತೆರಳಿ ಮುಂಜಾನೆ ವೇಳೆಗೆ ಸಿದ್ದುರವರ ಕೊಟ್ಟಿ ಗೆಯಲ್ಲಿದ್ದ ಹಸುವನ್ನು ಕೊಂದು ಹಾಕಿದೆ.

ಸುದ್ದಿ ತಿಳಿದ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ನೆಮ್ಮಲೆ ಗ್ರಾಮಕ್ಕೆ ತೆರಳಿ ಹಸು ಕಳೆದುಕೊಂಡ ಕುಂಞಂ ಗಡ ಸಿದ್ದು, ಸಿದ್ದಾರ್ಥ ಹಾಗೂ ಕುಟುಂಬದ ವರನ್ನು ಮಾತನಾಡಿಸಿದರು. ಅರಣ್ಯ ಇಲಾ ಖೆಯ ಹಿರಿಯ ಅಧಿಕಾರಿಗಳಿಗೆ ಪರಿ ಪರಿಯಾಗಿ ಬೇಡಿಕೊಂಡರು ಹುಲಿ ಸೆರೆ ಹಿಡಿಯುವ ಪ್ರಯತ್ನಕ್ಕೆ ಇಚ್ಚಾ ಶಕ್ತಿ ತೋರಿ ಸುತ್ತಿಲ್ಲ. ಸ್ಥಳೀಯ ಕಿರಿಯ ಅಧಿಕಾರಿ ಗಳನ್ನು ಸ್ಥಳಕ್ಕೆ ಕಳುಹಿಸಿ ಹಳೆಯ ಕಾಲದ ಬೋನ್‍ಅನ್ನು ನೆಪ ಮಾತ್ರಕ್ಕೆ ಇಟ್ಟು ತೆರಳು ತ್ತಿದ್ದಾರೆ. ಕೂಡಲೇ ಹುಲಿ ಸೆರೆಗೆ ಪ್ರಯತ್ನ ನಡೆಸದಿದ್ದಲ್ಲಿ ಹೋರಾಟ ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳದಿಂದ ಮಡಿಕೇರಿಯ ಸಿಸಿಎಫ್ ಲಿಂಗರಾಜ್‍ರವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಸಂಕೇತ್ ಪೂವಯ್ಯ, ಈ ಭಾಗದಲ್ಲಿ ಕಳೆದ 4 ದಿನಗಳಿಂದ ನಿರಂತರ ಹುಲಿ ದಾಳಿ ನಡೆಸುತ್ತಿದ್ದರು ಹಿರಿಯ ಅಧಿಕಾರಿಗಳಾದ ತಾವು ಸ್ಥಳಕ್ಕೆ ಭೇಟಿ ನೀಡದೆ ಇರುವ ಬಗ್ಗೆ ಪ್ರಶ್ನಿಸಿದರು. ಹುಲಿ ಸೆರೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಗಳು ಮಳೆಯನ್ನು ಲೆಕ್ಕಿಸದೇ ಹುಲಿ ಸೆರೆ ಹಿಡಿಯುವ ಬೋನ್ ಅನ್ನು ಇಡುವ ಮೂಲಕ ಹುಲಿ ಕಾರ್ಯಾಚರಣೆಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ದರು. ರೈತ ಸಂಘದ ಮುಖಂಡರಾದ ಐಯ್ಯಮಾಡ ಹ್ಯಾರಿ ಸೋಮೆಶ್, ಜೆಡಿಎಸ್‍ನ ಕಾರ್ಮಿಕ ಘಟಕದ ಜಿಲ್ಲಾ ಧ್ಯಕ್ಷ ಪರಮಾಲೆ ಗಣೇಶ್, ಊರಿನ ಗ್ರಾಮ ಸ್ಥರು, ಸಿಸಿಎಫ್ ಲಿಂಗರಾಜುರವರ ಮಾತಿಗೆ ತೀವ್ರ ಅಸಮದಾನ ವ್ಯಕ್ತಪಡಿಸಿದರು.

ಕಳೆದ 5 ದಿನಗಳಿಂದ ಈ ಭಾಗದ ಸುತ್ತ ಮುತ್ತಲಿನಲ್ಲಿ ಈಗಾಗಲೇ 4 ಜಾನುವಾರು ಗಳನ್ನು ಹುಲಿ ಬಲಿ ತೆಗೆದುಕೊಂಡಿದೆ. ತಿತಿಮತಿ ರ್ಯಾಪಿಡ್ ಫೋರ್ಸ್ ತಂಡ, ಪೊನ್ನಂಪೇಟೆ ಅರಣ್ಯ ಸಿಬ್ಬಂದಿಗಳು ಸೇರಿ ದಂತೆ ಅರಣ್ಯ ಇಲಾಖೆಯ ಸಂಜು, ಹಾಗೂ ಮತ್ತಿತರರು ಸ್ಥಳದಲ್ಲಿ ಹಾಜರಿದ್ದರು.

Translate »