ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ 10ನೇ ಬೃಹತ್ ಉದ್ಯೋಗ ಮೇಳ `ಆಳ್ವಾಸ್ ಪ್ರಗತಿ’ಯನ್ನು ಜು.6 ಮತ್ತು 7ರಂದು ಆಯೋಜಿಸಲಾಗಿದೆ ಎಂದು ಮೇಳದ ಮಾಧ್ಯಮ ಸಂಯೋಜಕಿ ಡಾ.ಮೌಲ್ಯ ಜೀವನ್‍ರಾಂ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ಸತತ 9 ವರ್ಷಗಳಿಂದಲೂ `ಆಳ್ವಾಸ್ ಪ್ರಗತಿ’ ಶೀರ್ಷಿಕೆಯಡಿ ಉದ್ಯೋಗ ಮೇಳ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಉದ್ಯೋಗ ಮೇಳ ದಶಕದ ಸಂಭ್ರಮದೊಂದಿಗೆ ಈ ಎರಡು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿ…