ವಿರಾಜಪೇಟೆ: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನಲ್ಲಿ ದಾಖಲೆಯ 35,29,608.15 ರೂ. ನಿವ್ವಳ ಲಾಭ ಗಳಿಸಿದೆಯೆಂದು ಸಂಘದ ಅಧ್ಯಕ್ಷ ಮೂಕೊಂಡ ಸಿ.ಅಯ್ಯಪ್ಪ ತಿಳಿಸಿದ್ದಾರೆ. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯ ನಂತರ ಮಾತನಾಡುತ್ತಾ ಸಂಘವು ರೈತರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಈಗಾಗಲೇ ಹಾಕಿಕೊಂಡಿದೆ. ನವ ಪೀಳಿಗೆಯ ಕೃಷಿಕರನ್ನು ಸಂಘದ ಸದಸ್ಯರನ್ನಾಗಿಸಿ ಸಂಘದ ಬಲವರ್ಧನೆ, ರೈತರಿಗೆ ಅಗತ್ಯದ ಮಾಹಿತಿಗಳನ್ನು ಏಕಕಾಲದಲ್ಲಿ ಆನ್ ಲೈನ್ ಮೂಲಕ ಮೊಬೈಲ್ ದೂರವಾಣಿಗೆ ರವಾನಿಸುವ ಉದ್ದೇಶ…