ಅಮ್ಮತ್ತಿ ಪಿಎಸಿಸಿ ನಿವ್ವಳ ಲಾಭದಲ್ಲಿ ದಾಖಲೆ ನಿರ್ಮಾಣ
ಕೊಡಗು

ಅಮ್ಮತ್ತಿ ಪಿಎಸಿಸಿ ನಿವ್ವಳ ಲಾಭದಲ್ಲಿ ದಾಖಲೆ ನಿರ್ಮಾಣ

July 16, 2018

ವಿರಾಜಪೇಟೆ: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನಲ್ಲಿ ದಾಖಲೆಯ 35,29,608.15 ರೂ. ನಿವ್ವಳ ಲಾಭ ಗಳಿಸಿದೆಯೆಂದು ಸಂಘದ ಅಧ್ಯಕ್ಷ ಮೂಕೊಂಡ ಸಿ.ಅಯ್ಯಪ್ಪ ತಿಳಿಸಿದ್ದಾರೆ.

ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾ ಸಭೆಯ ನಂತರ ಮಾತನಾಡುತ್ತಾ ಸಂಘವು ರೈತರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ಹತ್ತು ಹಲವು ಯೋಜನೆಗಳನ್ನು ಈಗಾಗಲೇ ಹಾಕಿಕೊಂಡಿದೆ. ನವ ಪೀಳಿಗೆಯ ಕೃಷಿಕರನ್ನು ಸಂಘದ ಸದಸ್ಯರನ್ನಾಗಿಸಿ ಸಂಘದ ಬಲವರ್ಧನೆ, ರೈತರಿಗೆ ಅಗತ್ಯದ ಮಾಹಿತಿಗಳನ್ನು ಏಕಕಾಲದಲ್ಲಿ ಆನ್ ಲೈನ್ ಮೂಲಕ ಮೊಬೈಲ್ ದೂರವಾಣಿಗೆ ರವಾನಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಮಾತ್ರವಲ್ಲ, ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ಕೃಷಿಕರೊಂದಿಗೆ ಸದಾ ಸಂಪರ್ಕದಲ್ಲಿರು ವಂತೆ ಮಾಹಿತಿ ಜಾಲವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

2003ರಲ್ಲಿ 27.06 ಲಕ್ಷ ರೂ.ಗಳಷ್ಟು ನಷ್ಟದಲ್ಲಿದ್ದ ಸಂಘವನ್ನು ಕಳೆದ 15ವರ್ಷಗಳಲ್ಲಿ 35ಲಕ್ಷ ರೂ.ಗಳ ಲಾಭದಲ್ಲಿ ತಂದಿರಿಸಿದ್ದೇವೆ. 2486 ಜನ ಸದಸ್ಯರನ್ನು ಹೊಂದಿರುವ ಸಂಘವು ಅತಿ ಬಲಿಷ್ಠವಾಗಿದೆ. ಸದಸ್ಯ ರುಗಳಿಗೆ ವಿವಿಧ ಸಾಲಗಳ ವಿತರಣೆಯಾಗಿದ್ದು. ಇವುಗಳ ಪೈಕಿ ಶೇ.92ರಷ್ಟು ವಸೂಲಾತಿ ನಡೆದಿದೆ. ಸದಸ್ಯರುಗಳಿಗೆ ಶೇ.20 ಡಿವಿಡೆಂಟ್ ಹಣ ನೀಡಲಾಗುತ್ತಿದ್ದು, ಕಳೆದ 11 ವರ್ಷಗಳಿಂದ ಲೆಕ್ಕ ಪತ್ರ ನಿರ್ವಹಣೆ, ಸಾಲ ವಸೂ ಲಾತಿಯಲ್ಲಿ ಹಾಗೂ ಆಡಿಟ್ ವರ್ಗೀಕರಣದಲ್ಲಿ ಎ.ತರಗತಿಯನ್ನೇ ಕಾಪಾಡಿಕೊಂಡು ಬರಲಾಗಿದೆ. ಸಂಘದ ವ್ಯಾಪ್ತಿಗೆ ಬರುವ ಕಾವಾಡಿ, ಕುಂಬೇರಿ, ಅಮ್ಮತ್ತಿ, ಪುಲಿಯೇರಿ, ಬಿಳುಗುಂದ, ನಲ್ವತೊಕ್ಲು, ಹೊಸ್ಕೋಟೆ ಗ್ರಾಮಗಳ ಕೃಷಿಕರಿಗೆ ಅಲ್ಪಾವಧಿ , ಮಧ್ಯಮಾವಧಿ ಹಾಗೂ ವಾಹನ ಸಾಲದ ಸೌಲಭ್ಯ ಒದಗಿಸಿ ಕೃಷಿಕರ ಸರ್ವತೋಮುಖ ಅಭಿವೃದ್ಧಿಗೆ ಸಂಘವು ಕಾರಣವಾಗಿದೆ ಎಂದರು”.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕುಟ್ಟಂಡ ವಿನು ಪೂವಯ್ಯ , ನಿರ್ದೇಶಕರುಗಳಾದ ಐನಂಡ ಲಾಲಾ ಅಯ್ಯಣ್ಣ, ಎಂ.ಎನ್.ಚಿಣ್ಣಪ್ಪ, ಎನ್.ಬಿ.ದೇವಯ್ಯ, ಎಂಡಿ.ಯೋಗೀಶ್, ಎಂ.ಎಂ.ಉತ್ತಪ್ಪ, ಎಂ.ಎ. ಸಂತೋಷ್, ಶ್ರೀಮತಿ ಠವಿ ನಾಚಪ್ಪ, ಕೆ.ಟಿ.ಆಶಾ ಪೊನ್ನಮ್ಮ, ಹೆಚ್.ಕೆ.ಸಿಂಗ್ರಯ್ಯ ಹಾಗೂ ಕಳೆದ 11 ವರ್ಷ ಗಳಿಂದ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎಸ್.ವಿ.ನಾರಾಯಣ, ನೂತನ ಕಾರ್ಯನಿರ್ವಹಣಾ ಧಿಕಾರಿ ಮೊಳ್ಳೇರ ರಜನಿ ಹಾಜರಿದ್ದರು.

Translate »