ಮಂಡ್ಯ: ಮೊದಲು ಎಸಿಬಿ ಮುಚ್ಚಿ, ಬಲಿಷ್ಠ ಲೋಕಾಯುಕ್ತ ಸಂಸ್ಥೆ ಯನ್ನು ಪುನರ್ ಸ್ಥಾಪಿಸಿ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾತು ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸಲಹೆ ನೀಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸಿಬಿಯೂ ಒಂದು ತನಿಖಾ ಸಂಸ್ಥೆಯೇ ಎಂದು ಪ್ರಶ್ನೆ ಮಾಡಿದ ಅವರು, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಒಂದು ಸ್ವತಂತ್ರ ಸಂಸ್ಥೆ ಬೇಕು. ಆದರೆ ಎಸಿಬಿ ಸ್ವತಂತ್ರ ಸಂಸ್ಥೆಯಲ್ಲ. ನಾನು ಕೊಟ್ಟ ವರದಿ ಮೇಲೆಯೇ ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ಮಾಡಿತು. ಆದರೆ ಅಧಿಕಾರಕ್ಕೆ ಬಂದ ನಂತರ ಸಂಸ್ಥೆಯನ್ನು ದುರ್ಬಲ ಮಾಡಿತು ಅಂತ ಆಕ್ರೋಶ ವ್ಯಕ್ತಪಡಿಸಿದರು.
ಜೈಲಿಗೆ ಹೋಗಿ ಬರುವವರಿಗೆ ಹಾರ ಹಾಕಿ ಸ್ವಾಗತ: ನಗರದ ಗಾಂಧಿ ಭವನದಲ್ಲಿ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶತಾಯುಷಿ ಸಾಹಿತಿ ದಿ.ಸೀತಾಸುತ ಅವರ 120ನೇ ವರ್ಷದ ಸಂಸ್ಮರಣೆ, ಡಾ.ವಿ.ಟಿ.ಸುಶೀಲ ಜಯರಾಮ್ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಮಾತನಾಡಿದ ಸಂತೋಷ್ ಹೆಗಡೆ, ನಮ್ಮ ಪೂರ್ವಿಕರು ಜೈಲಿಗೆ ಹೋಗಿ ಬಂದವರನ್ನು ಸಮಾಜದಿಂದ ಬಹಿಷ್ಕರಿ ಸುತ್ತಿದ್ದರು. ಆದರೆ ಇಂದು ಜೈಲಿಗೆ ಹೋಗಿ ಬರುವವರಿಗೆ ಹಾರ ಹಾಕಿ ಸ್ವಾಗತ ಕೋರಲಾಗುತ್ತಿದೆ. ಇಂತಹ ಸಮಾಜದಲ್ಲಿ ನಾವಿದ್ದೇವೆ. ಸಮಾಜದ ಬದಲಾವಣೆ ಆಗದಿದ್ದರೆ ಮುಂದೆ ಬಹಳಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಹಿರಿಯರು ಕಟ್ಟಿದ ಮೌಲ್ಯಗಳು ಕಾಣೆಯಾಗಿವೆ. ಕನಿಷ್ಠ ಎರಡು ಮೌಲ್ಯ ಗಳನ್ನು ಅಳವಡಿಸಿಕೊಂಡರೆ ಸಮಾಜ ದಲ್ಲಿ ಬದಲಾವಣೆ ತರಬಹುದು. ಮಾನವ ನಲ್ಲಿ ತೃಪ್ತಿ ಮನೋಭಾವ ಬೆಳೆಯಬೇಕು. ದುರಾಸೆ ದೂರ ಮಾಡಿ ಇರುವುದರಲ್ಲಿ ಜೀವನ ನಡೆಸುವ ತೃಪ್ತ ಮನೋಭಾವ ಬೆಳೆಸಿ ಕೊಳ್ಳಬೇಕು. ಇದರ ಜೊತೆಗೆ ಹಿರಿಯರು ಕಟ್ಟಿದ ಮೌಲ್ಯ, ಮೌನವೀಯ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಅಪಾರ ಕೊಡುಗೆ: ಪುಟ್ಟಚ್ಚಿ ಸಿದ್ದೇ ಗೌಡರ ಕುಟುಂಬ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ಸಿದ್ದೇಗೌಡರು ಕಷ್ಟದಲ್ಲಿ ಸುಖ ಕಂಡಂತಹ ವ್ಯಕ್ತಿ. ಶಿಕ್ಷಣ ಪಡೆಯಲು ಹರಸಾಹಸ ಪಟ್ಟಿದ್ದರು ಎಂದು ಕೇಳಿದ್ದೇನೆ. ಆದರೂ, ಸಹ ಅವರಲ್ಲಿ ಅಪಾರ ಸಾಮಾ ಜಿಕ ಕಳಕಳಿ ಇತ್ತು. ಅವರಂತೆ ಅವರ ಮಕ್ಕಳೂ ನಡೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲಾಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ ನೀಡಿದ್ದಾರೆ. ಗರ್ಭಿಣಿಯರ ವಾರ್ಡ್ ಕಟ್ಟಿಸಿಕೊಟ್ಟಿದ್ದಾರೆ. ಜೊತೆಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿರುವುದು ಮಾದರಿಯಾಗಿದೆ ಎಂದರು.
ಬಳಿಕ ದೇಶ ಸೇವಾ ಪ್ರಶಸ್ತಿಯನ್ನು ಶೌರ್ಯಪತ್ರ ವಿಜೇತ(ಮರಣೋತ್ತರ) ಲೆಫ್ಟಿನೆಂಟ್ ಕರ್ನಲ್ ಇ.ಕೆ.ನಿರಂಜನ್ ಅವರ ಪತ್ನಿ ಡಾ.ರಾಧಿಕಾ, ಧಾರವಾಡದ ಸಾಹಿತಿ ಡಾ.ಹೇಮ ಪಟ್ಟಣಶೆಟ್ಟಿ ಅವರಿಗೆ ಸಾಹಿತ್ಯ ಸೇವಾ ಪ್ರಶಸ್ತಿ, ಡಾ.ವಿ.ಟಿ.ಸುಶೀಲ ಜಯರಾಂ ವೈದ್ಯಕೀಯ ಪ್ರಶಸ್ತಿಯನ್ನು ಡಾ.ಬಿ.ರಮಣರಾವ್ ಹಾಗೂ ಬಿಇ ವಿದ್ಯಾರ್ಥಿನಿ ಮಲ್ಲನಾಯಕನಹಳ್ಳಿಯ ಎಂ.ಎಸ್.ಭವ್ಯ ಅವರಿಗೆ ಪ್ರತಿಭಾ ಪುರ ಸ್ಕಾರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ವಿದ್ಯಾರ್ಥಿ ಗಳು ಭರತನಾಟ್ಯ ಪ್ರದರ್ಶಿಸಿದರು. ಸಾಂಸ್ಕøತಿಕ ಟ್ರಸ್ಟ್‍ನ ಅಧ್ಯಕ್ಷ ಕೆ.ಎಸ್. ದೊರೆಸ್ವಾಮಿ ಸೀತಾಸುತರನ್ನು ಕುರಿತು ಮಾತನಾಡಿದರು. ಡಾ.ಕೆ.ಎಸ್.ಜಯ ರಾಮ, ಡಾ.ಕೆ.ಎಸ್.ಕೃಷ್ಣ, ಕೆ.ಎಸ್.ಶ್ರೀಕಂಠ ಸ್ವಾಮಿ, ಡಾ.ಕೆ.ಜೆ.ದಿನೇಶ್, ಡಾ.ಡಿ.ಉಷಾ ರಾಣಿ ಇತರರು ಭಾಗವಹಿಸಿದ್ದರು.