ವಿರಾಜಪೇಟೆ: ಕಳೆದ 15 ವರ್ಷಗಳಿಂದಲೂ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯವರೇ ಶಾಸಕರಾಗಿದ್ದು. ತಾಲೂಕು ಕೇಂದ್ರವಾದ ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆಗಳು ಹೊಂಡ ಗುಂಡಿಗಳಾಗಿದ್ದರೂ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಜನರೇ ಗಮನಿಸಬೇಕಾಗಿದೆ ಎಂದು ಮಾಜಿ ಎಂಎಲ್‍ಸಿ ಸಿ.ಎಸ್.ಅರುಣ್ ಮಾಚಯ್ಯ ಹೇಳಿದರು. ವಿರಾಜಪೇಟೆ ಪಪಂನ ಐದನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಡಿ.ಐ.ಎಜಾಸ್ ಅವರ ಪರ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ಅವರು, ವಿರಾಜಪೇಟೆ ಪಪಂಗೆ 2005-06ನೇ ಸಾಲಿನಲ್ಲಿ ರೂ.11 ಕೋಟಿ ಬಿಡುಗಡೆಯಾಗಿತ್ತು. ಈಗ ಪ್ರತಿ ವರ್ಷ ಹೆಚ್ಚು ಅನುದಾನ…