ಕಾಂಗ್ರೆಸ್ ಅಭ್ಯರ್ಥಿ ಪರ ಅರುಣ್ ಮಾಚಯ್ಯ ಪ್ರಚಾರ
ಕೊಡಗು

ಕಾಂಗ್ರೆಸ್ ಅಭ್ಯರ್ಥಿ ಪರ ಅರುಣ್ ಮಾಚಯ್ಯ ಪ್ರಚಾರ

October 27, 2018

ವಿರಾಜಪೇಟೆ:  ಕಳೆದ 15 ವರ್ಷಗಳಿಂದಲೂ ವಿರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯವರೇ ಶಾಸಕರಾಗಿದ್ದು. ತಾಲೂಕು ಕೇಂದ್ರವಾದ ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆಗಳು ಹೊಂಡ ಗುಂಡಿಗಳಾಗಿದ್ದರೂ ಅಭಿವೃದ್ಧಿ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ಜನರೇ ಗಮನಿಸಬೇಕಾಗಿದೆ ಎಂದು ಮಾಜಿ ಎಂಎಲ್‍ಸಿ ಸಿ.ಎಸ್.ಅರುಣ್ ಮಾಚಯ್ಯ ಹೇಳಿದರು.

ವಿರಾಜಪೇಟೆ ಪಪಂನ ಐದನೇ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಡಿ.ಐ.ಎಜಾಸ್ ಅವರ ಪರ ಚುನಾವಣಾ ಪ್ರಚಾರದ ಸಂದರ್ಭ ಮಾತನಾಡಿದ ಅವರು, ವಿರಾಜಪೇಟೆ ಪಪಂಗೆ 2005-06ನೇ ಸಾಲಿನಲ್ಲಿ ರೂ.11 ಕೋಟಿ ಬಿಡುಗಡೆಯಾಗಿತ್ತು. ಈಗ ಪ್ರತಿ ವರ್ಷ ಹೆಚ್ಚು ಅನುದಾನ ಬರುತ್ತಿದ್ದು, ಪಟ್ಟಣದಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಓಡಾಡುತ್ತಿದ್ದರೂ ಅನೇಕ ವರ್ಷಗಳಿಂದಲು ರಸ್ತೆ ಮಾತ್ರ ಅಭಿವೃದ್ಧಿ ಕಂಡಿಲ್ಲ. ಅದರಿಂದ ಜನರು ಬದಲಾ ವಣೆಯನ್ನು ಬಯಸಿ ಕಾಂಗ್ರೆಸ್ ಪಕ್ಷದತ್ತ ಒಲವು ತೋರಿದ್ದಾರೆ ಎಂದರಲ್ಲದೆ, ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತನೀಡಿ ಪಂಚಾಯಿತಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಡುವಂತೆ ಕೋರಿದರು. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖಂ ಡರಾದ ಟಾಟು ಮೊಣ್ಣಪ್ಪ, ನಿಸಾರ್ ಅಹ್ಮದ್, ನರೇಂದ್ರ ಕಾಮತ್, ಪ್ರಕಾಶ್, ನಾಪೋಕ್ಲು ವಿನ ರಮಾನಾಥ್, ಅಭ್ಯರ್ಥಿ ಎಜಾಸ್ ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು.

Translate »