ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡುವಂತೆ ಧರ್ಮಗುರುಗಳ ಸಲಹೆ ಮೈಸೂರು, ಆ. 12 (ಆರ್‍ಕೆ)- ಬಕ್ರೀದ್ ಅಂಗವಾಗಿ ಮೈಸೂರಿನ ತಿಲಕ್‍ನಗರದಲ್ಲಿ ರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಇಂದು ಭಕ್ತಿಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೈಸೂರಿನ ಸರ್‍ಖಾಜಿ ಹಜರತ್ ಮೌಲಾನ ಮೊಹಮದ್ ಉಸ್ಮಾನ್ ಷರೀಫ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಾಡಿನ ಜನತೆಗೆ ಶುಭ ಸಂದೇಶ ನೀಡಿದರು. ದೇವರ ಅನು ಗ್ರಹದಂತೆ ಪ್ರೊಪೆಟ್ ಇಬ್ರಾಹಿಂ ಖಲೀಲ್ ಉಲ್ಲಾ ಅವರು ತಮ್ಮ ಪ್ರೀತಿಯ ಮಗ ಪ್ರೊಪೆಟ್ ಇಸ್ಮಾಯಿಲ್ ಜಬ್ಬಿ ಉಲ್ಲಾ…