ಮೈಸೂರಲ್ಲಿ ಮುಸ್ಲಿಂ ಬಾಂಧವರಿಂದ ಬಕ್ರೀದ್ ಸಾಮೂಹಿಕ ಪ್ರಾರ್ಥನೆ
ಮೈಸೂರು

ಮೈಸೂರಲ್ಲಿ ಮುಸ್ಲಿಂ ಬಾಂಧವರಿಂದ ಬಕ್ರೀದ್ ಸಾಮೂಹಿಕ ಪ್ರಾರ್ಥನೆ

August 13, 2019

ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡುವಂತೆ ಧರ್ಮಗುರುಗಳ ಸಲಹೆ

ಮೈಸೂರು, ಆ. 12 (ಆರ್‍ಕೆ)- ಬಕ್ರೀದ್ ಅಂಗವಾಗಿ ಮೈಸೂರಿನ ತಿಲಕ್‍ನಗರದಲ್ಲಿ ರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಇಂದು ಭಕ್ತಿಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಮೈಸೂರಿನ ಸರ್‍ಖಾಜಿ ಹಜರತ್ ಮೌಲಾನ ಮೊಹಮದ್ ಉಸ್ಮಾನ್ ಷರೀಫ್ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಾಡಿನ ಜನತೆಗೆ ಶುಭ ಸಂದೇಶ ನೀಡಿದರು. ದೇವರ ಅನು ಗ್ರಹದಂತೆ ಪ್ರೊಪೆಟ್ ಇಬ್ರಾಹಿಂ ಖಲೀಲ್ ಉಲ್ಲಾ ಅವರು ತಮ್ಮ ಪ್ರೀತಿಯ ಮಗ ಪ್ರೊಪೆಟ್ ಇಸ್ಮಾಯಿಲ್ ಜಬ್ಬಿ ಉಲ್ಲಾ ಅವರನ್ನು ಬಲಿದಾನಕ್ಕೆ ಮುಂದಾಗಿದ್ದರು ಎಂಬುದನ್ನು ಉಲ್ಲೇಖಿಸಿದ ಧರ್ಮ ಗುರುಗಳು, ತ್ಯಾಗ, ಬಲಿದಾನ ಮಾಡುವ ಮೂಲಕ ಭಕ್ತಿಭಾವದಿಂದ ಅರ್ಥ ಪೂರ್ಣವಾಗಿ ಬಕ್ರೀದ್ ಹಬ್ಬ ಆಚರಿ ಸುವಂತೆ ಸಲಹೆ ನೀಡಿದರು.

ಕೋಮು ಸೌಹಾರ್ದ ಮತ್ತು ಸೋದ ರತ್ವದಿಂದ ಸಮಾಜದಲ್ಲಿ ಶಾಂತಿ ಕಾಪಾಡ ಬೇಕು. ಪ್ರಾಣಿ ಬಲಿಕೊಟ್ಟು ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಿ, ಒಂದು ಭಾಗವನ್ನು ತಾವಿರಿಸಿಕೊಂಡು, ಇನ್ನೊಂದು ಭಾಗವನ್ನು ತಮ್ಮ ಸಂಬಂಧಿಕರಿಗೆ ಹಾಗೂ ಮತ್ತೊಂದು ಭಾಗವನ್ನು ಜಾತಿ-ಭೇದ ವಿಲ್ಲದೆ ಎಲ್ಲಾ ಸಮುದಾಯದ ಬಡವರಿಗೆ ಹಂಚಿ ಎಂದು ಸರ್‍ಖಾಜಿ ಅವರು ಮುಸ್ಲಿಂ ಬಾಂಧವರಿಗೆ ಹೇಳಿದರು.

ದೇಶದ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಗಾಗಿ ಪ್ರಾರ್ಥಿಸಿದ ಉಸ್ಮಾನ್ ಷರೀಫ್ ಅವರು, ಧಾರಾಕಾರ ಮಳೆಯಿಂದುಂಟಾದ ಪ್ರವಾಹದಲ್ಲಿ ಸಿಲುಕಿ ಸಂಕಷ್ಟದಲ್ಲಿರುವವ ರಿಗೆ ಸಹಾಯಹಸ್ತ ನೀಡಿ, ಕೊಡಗು, ಕೇರಳದ ಜನರನ್ನು ರಕ್ಷಿಸುವಂತೆಯೂ ಇದೇ ವೇಳೆ ಮನವಿ ಮಾಡಿದರು.

ಬಕ್ರೀದ್ ಹಬ್ಬಕ್ಕೆ ಪ್ರಾಣಿ ಬಲಿಕೊಡು ವುದರಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಮೈಸೂರಲ್ಲಿ ಸ್ವಚ್ಛತೆ ಕಾಪಾಡು ವಂತೆಯೂ ಅವರು ಸಲಹೆ ನೀಡಿದರು.

`ಸ್ಟಾರ್ ಆಫ್ ಮೈಸೂರ್’ ಅಂಕಣ ಕಾರರಾದ ಖ್ಯಾತ ವೈದ್ಯ ಡಾ.ಕೆ. ಜಾವೀದ್ ನಯೀಮ್, ಫರೂಕಿಯಾ ಪಿಯು ಕಾಲೇಜಿನ ಕಾರ್ಯದರ್ಶಿ ಡಾ. ಎಂ. ಸಯೀದ್ ಅಹಮದ್, ತನ್‍ಜೀಂ ಇ ಅಹಲೆ ಸುನ್ನತ್ ಓ ಜಮಾತ್ ಅಧ್ಯಕ್ಷ ಹುಮಾಯುನ್‍ಫರ್, ಪ್ರಧಾನ ಕಾರ್ಯ ದರ್ಶಿ ಜಮೀಲ್ ಅಹಮದ್ ಅಶ್ರಫಿ, ಮೈಸೂರು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ  ಆರಿಫ್ ಎ. ಮೇಕ್ರಿ, ಮಾಜಿ ಕಾರ್ಪೋರೇಟರ್ ಸುಹೇಲ್ ಬೇಗ್, ಹಿರಿಯ ಪತ್ರಕರ್ತ ಅಪ್ಸರ್ ಪಾಷಾ, ಯುವ ಕಾಂಗ್ರೆಸ್ ಮುಖಂಡ ಶೌಕತ್ ಆಲಿ ಖಾನ್, ಅಬ್ದುಲ್ ಸಲಾಂ, ಮೈಸೂರು ಡಿಸ್ಟ್ರಿಕ್ಟ್ ರಿಲೀಫ್ ಕಮಿಟಿ ಕಾರ್ಯದರ್ಶಿ ಮೊಹಮದ್ ಮುಮ್ತಾಜ್ ಅಹಮದ್ ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗ ವಹಿಸಿದ್ದರು. ರಾಜೀವ್‍ನಗರ, ಗೌಸಿ ಯಾನಗರ, ಉದಯಗಿರಿ ಸೇರಿದಂತೆ ಮೈಸೂರಿನ ಹಲವು ಮಸೀದಿಗಳಲ್ಲಿಯೂ ಬಕ್ರೀದ್ ಸಾಮೂಹಿಕ ಪ್ರಾರ್ಥನೆ ನಡೆ ಯಿತು. ಡಿಸಿಪಿಗಳಾದ ಎಂ. ಮುತ್ತು ರಾಜ್, ಬಿ.ಟಿ ಕವಿತಾ, ಎಸಿಪಿಗಳಾದ ಎಸ್.ಜಿ. ಗಜೇಂದ್ರ ಪ್ರಸಾದ್, ಸಿ. ಗೋಪಾಲ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಗೆ ವಿಶೇಷ  ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಂಚಾರ ವಿಭಾಗದ ಎಸಿಪಿ ಜಿ.ಎನ್. ಮೋಹನ್ ಅವರು ಸಂಚಾರ ಸುಗಮಗೊಳಿಸಲು ಸಿಬ್ಬಂದಿಗಳನ್ನು ನಿಯೋಜಿಸಿದ್ದರು.

 

Translate »