ಮೈಸೂರು: ರಸ್ತೆ ಬದಿ ಆಹಾರ ಪದಾರ್ಥ ವ್ಯಾಪಾರಿಗಳಿಗಾಗಿ ಮೈಸೂರಿನ ಬಲ್ಲಾಳ್ ಸರ್ಕಲ್ ಬಳಿ ಪಾಲಿಕೆ ನಿರ್ಮಿಸಿರುವ ಫುಡ್ ಜೋನ್ ಸೆಪ್ಟೆಂಬರ್ ಮೊದಲ ವಾರ ಆರಂಭವಾಗಲಿದೆ ಎಂದು ಪಾಲಿಕೆ ಅಪರ ಆಯುಕ್ತ ರವೀಂದ್ರ ತಿಳಿಸಿದ್ದಾರೆ. ಮೈಸೂರು ನಗರದಾದ್ಯಂತ ಬಹುತೇಕ ಎಲ್ಲಾ ರಸ್ತೆಗಳ ಫುಟ್‍ಪಾತ್‍ಗಳ ಮೇಲೆ ಪಾನಿಪೂರಿ, ಗೋಬಿ ಮಂಚೂರಿ, ಫಾಸ್ಟ್ ಫುಡ್ ಅಂಗಡಿಗಳನ್ನು ನಡೆಸುತ್ತಿದ್ದು, ತ್ಯಾಜ್ಯ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದರಿಂದ ಸ್ವಚ್ಛ ನಗರಿಯಲ್ಲಿ ಅಶುಚಿತ್ವಗೊಳ್ಳುತ್ತಿದೆಯಲ್ಲದೇ, ಫುಟ್‍ಪಾತ್‍ಗೆ ಅಳವಡಿಸಿರುವ ಟೈಲ್ಸ್ ಮೇಲೆ ಎಣ್ಣೆ ಮತ್ತಿತರ ಪದಾರ್ಥಗಳು ಚೆಲ್ಲಿ ಹಾಳಾಗುತ್ತಿರುವುದು…