ಮೈಸೂರು,ಫೆ.15(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯದ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಬಂಡೀಪುರ ಕಾಡಂಚಿನ ಗ್ರಾಮಸ್ಥ ರೊಂದಿಗೆ ಸಮಾಲೋಚಿಸಿ ಮಾನವ-ಪ್ರಾಣಿ ಸಂಘರ್ಷ ತಡೆಗೆ ಅನುಸರಿಸುತ್ತಿರುವ ಕ್ರಮ ಕುರಿತು ಮಾಹಿತಿ ಪಡೆದರು. ಕನ್ಸರ್ವೇಷನ್ ವೈಲ್ಡ್‍ಲೈಫ್ ಫೌಂಡೇಷನ್ ವತಿ ಯಿಂದ ಆಯೋಜಿಸಿದ್ದ `ಪರಿಸರ ಜಾಗೃತಿ’ ಶಿಬಿರ ದಲ್ಲಿ ಅಂತಿಮ ವರ್ಷದ 30 ಮಂದಿ ವಿದ್ಯಾರ್ಥಿಗಳು ವನ್ಯಜೀವಿ ಸಂರಕ್ಷಣೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಂಡರು. ಇದೇ ವೇಳೆ ಫೌಂಡೇಷನ್ ಮುಖ್ಯಸ್ಥ ರಾಜ್‍ಕುಮಾರ್ ಡಿ.ಅರಸ್ ಮಾತನಾಡಿ, ವನ್ಯಸಂಪ ತ್ತಿನ ಸಂರಕ್ಷಣೆಯ ಜವಾಬ್ದಾರಿ ಕೇವಲ ಅರಣ್ಯ…